ಕರ್ನಾಟಕ

karnataka

ETV Bharat / state

ಕೈ ಬೀಸಿ ಕರೆಯುವ ಕಡಲ ತೀರ... ಗತ ವೈಭವಕ್ಕೆ ಮರಳಿದ ಮಲ್ಪೆ ಬೀಚ್..! - ಕೈ ಬೀಸಿ ಕರೆಯುವ ಕಡಲ ತೀರ

ಕೊರೊನಾದಿಂದ ಬಿಕೋ ಎನ್ನುತ್ತಿದ್ದ ಉಡುಪಿಯ ಮಲ್ಪೆ ಬೀಚ್​​ ಇದೀಗ ಸಹಜ ಸ್ಥಿತಿಗೆ ತಲುಪಿದ್ದು, ಪ್ರವಾಸಿಗರು ಮತ್ತೆ ಸಮುದ್ರ ತೀರದತ್ತ ಮುಖ ಮಾಡುತ್ತಿದ್ದಾರೆ.

Malpe Beach in udupi
ಗತ ವೈಭವಕ್ಕೆ ಮರಳಿದ ಮಲ್ಪೆ ಬೀಚ್

By

Published : Nov 16, 2020, 1:42 PM IST

ಉಡುಪಿ:ಕೊರೊನಾದಿಂದ ಕರಾವಳಿಯ ಸಮುದ್ರ ತೀರಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದವು. ಆದರೆ, ಇದೀಗ ಮತ್ತೆ ಬೀಚ್​​​ಗಳತ್ತ ಪ್ರವಾಸಿಗರು ಮುಖ ಮಾಡಿದ್ದು, ಗತ ವೈಭವಕ್ಕೆ ಬೀಚ್​​​ಗಳು ಮರಳುತ್ತಿವೆ.

ಉಡುಪಿಗೆ ಬಂದ ಪ್ರವಾಸಿಗರು ಮಲ್ಪೆ ಬೀಚ್​​​​ಗೆ ಹೋಗದೇ ವಾಪಸ್​ ಹಿಂದಿರುಗುವುದಿಲ್ಲ. ಅಲ್ಲಿ ಮರಳಿಗೆ ಮೈಯೊಡ್ಡಿ ಸಮುದ್ರದ ನೀರಿನಲ್ಲಿ ಆಟ ಆಡುವುದೇ ಒಂಥರಾ ಮಜಾ.

ಗತ ವೈಭವಕ್ಕೆ ಮರಳಿದ ಮಲ್ಪೆ ಬೀಚ್

ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ಸಿಗುತ್ತಿರುವ ಈ ಕಾಲಘಟ್ಟದಲ್ಲಿ ಮಲ್ಪೆ ಬೀಚ್ ಕೂಡಾ ಅಭಿವೃದ್ಧಿ ಹೊಂದುತ್ತಿದೆ. ಮಲ್ಪೆಯಿಂದ ಸೀ ವಾಕ್ ಸೈಂಟ್ ಮೇರೀಸ್ ಐಲ್ಯಾಂಡ್​​​​ಗೂ ಕೂಡಾ ಪ್ರವಾಸಿಗರು ತೆರಳುತ್ತಾರೆ. ಆದ್ರೆ ಸಮುದ್ರ ತೀರದಲ್ಲಿ ಒಂದಿಷ್ಟು ಹೊತ್ತು ಕಳೆದು, ಮುಂದಿನ ಕಡೆ ಪ್ರಯಾಣ ಬೆಳೆಸುತ್ತಾರೆ.

ಕೊರೊನಾದಿಂದ ಒಂದಿಷ್ಟು ದಿನಗಳ‌ ಕಾಲ ಮಲ್ಪೆ, ಪ್ರವಾಸಿಗರಿಲ್ಲದೇ ಫುಲ್ ಥಂಡಾ ಹೊಡೆದಿತ್ತು. ಪ್ರವಾಸಿಗರನ್ನು ನಂಬಿಕೊಂಡಿದ್ದ ವ್ಯಾಪಾರಸ್ಥರು, ಕೂಡಾ ಆರ್ಥಿಕ ಹೊಡೆತದಿಂದ ಅಕ್ಷರಶಃ ನಲುಗಿ ಹೋಗಿದ್ದರು. ಇದೀಗ ಮತ್ತೆ ಬೀಚ್​ನತ್ತ ಜನರು ಬರುತ್ತಿದ್ದು, ಸ್ಥಳೀಯ ವ್ಯಾಪಾರಸ್ಥರು ಖುಷಿಯಾಗಿದ್ದಾರೆ.

ABOUT THE AUTHOR

...view details