ಕರ್ನಾಟಕ

karnataka

ETV Bharat / state

ಬೈಡನ್​ ಪತ್ನಿಗೆ ನೀತಿ ನಿರ್ದೇಶಕಿಯಾಗಿ ಕನ್ನಡತಿ ಮಾಲಾ ಅಡಿಗ ನೇಮಕ - ಜಿಲ್ ಬೈಡನ್ ನೀತಿ ನಿರ್ದೇಶಕಿಯಾಗಿ ಕುಂದಾಪುರದ ಮಾಲಾ ಅಡಿಗ ಆಯ್ಕೆ

ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ನೀತಿ ನಿರ್ದೇಶಕರಾಗಿ ಕುಂದಾಪುರದ ಮಾಲಾ ಅಡಿಗ ಅವರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ಆಯ್ಕೆ ಮಾಡಿದ್ದಾರೆ.

Mala Adiga appointed Jill Biden Policy Director
ಜಿಲ್ ಬೈಡನ್ ನೀತಿ ನಿರ್ದೇಶಕಿಯಾಗಿ ನೇಮಕಗೊಂಡ ಕುಂದಾಪುರದ ಮಾಲಾ ಅಡಿಗ

By

Published : Nov 22, 2020, 8:49 AM IST

Updated : Nov 23, 2020, 12:25 PM IST

ಉಡುಪಿ: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿಗೆ ಪಾಲಿಸಿ ಡೈರೆಕ್ಟರ್ ಆಗಿ, ಜಿಲ್ಲೆಯ ಕುಂದಾಪುರ ಮೂಲದ ಮಾಲಾ ಅಡಿಗ ಅವರು ಆಯ್ಕೆ ಆಗಿದ್ದಾರೆ.

ಅಮೆರಿಕದ ಪ್ರಥಮ ಮಹಿಳೆ ಆಗಿರುವ ಜಿಲ್ ಬೈಡನ್​ಗೆ ಮಾಲಾ ಅಡಿಗ ಅವರನ್ನು ಪಾಲಿಸಿ ಡೈರೆಕ್ಟರ್ ಆಗಿ ಜೋ ಬೈಡನ್ ಆಯ್ಕೆ ಮಾಡಿದ್ದಾರೆ. ಕುಂದಾಪುರ ತಾಲೂಕು ಕಕ್ಕುಂಜೆಯ ಅಡಿಗ ಕುಟುಂಬದ ಕುಡಿ ಮಾಲಾ ಅಡಿಗ ಅವರ ಕುಟುಂಬ ಕಳೆದ 50 ವರ್ಷಗಳಿಂದ ಅಮೆರಿಕದಲ್ಲೇ ವಾಸವಾಗಿದ್ದು, ಮಾಲಾ ಅವರ ತಂದೆ ರಮೇಶ್ ಅಡಿಗ ಅಮೆರಿಕದಲ್ಲಿ ವೈದ್ಯರಾಗಿದ್ದಾರೆ.

ಮಾಲಾ ಅಡಿಗ ಅವರ ಸಂಬಂಧಿ ಪ್ರತಿಕ್ರಿಯೆ

ಮಾಲಾ ಅವರು ಯುಎಸ್​ನಲ್ಲೇ ಹುಟ್ಟಿ ಬೆಳೆದವರು. ಅವರು ಈ ಹಿಂದೆ ಬೈಡನ್ ಫೌಂಡೇಶನ್ ನ ಉನ್ನತ ಶಿಕ್ಷಣ ನಿರ್ದೇಶಕಿಯಾಗಿ, ಬರಾಕ್ ಒಬಾಮಾಗೆ ಶಿಕ್ಷಣ, ಸಾಂಸ್ಕೃತಿಕ ವಿಭಾಗದ ಉಪ ಸಹಾಯಕ ಕಾರ್ಯದರ್ಶಿಯಾಗಿ ಹಾಗೂ ಅಮೆರಿಕದ ನ್ಯಾಷನಲ್ ಸೆಕ್ಯೂರಿಟಿ ಸ್ಟಾಫ್ ನಲ್ಲಿ ಮಾನವ ಹಕ್ಕು ವಿಭಾಗದ ನಿರ್ದೇಶಕಿಯಾಗಿ ಕೂಡ ಸೇವೆ ಸಲ್ಲಿಸಿದ್ದರು.

ಸದ್ಯ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಪತ್ನಿಯ ಪಾಲಿಸಿ ಡೈರೆಕ್ಟರ್ ಆಗಿ ನೇಮಕ ಆಗಿರುವುದು ಉಡುಪಿ ಜಿಲ್ಲೆ ಮತ್ತು ಕನ್ನಡ ನಾಡಿಗೆ ಹೆಮ್ಮೆ ತರುವ ವಿಷಯವಾಗಿದೆ.

Last Updated : Nov 23, 2020, 12:25 PM IST

For All Latest Updates

TAGGED:

ABOUT THE AUTHOR

...view details