ಉಡುಪಿ:ನಿನ್ನೆ ಚೂರಿ ಇರಿತಕ್ಕೆ ಒಳಗಾಗಿದ್ದ ಪ್ರಿಯತಮ ಮತ್ತು ಪ್ರೇಯಸಿ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ಯುವತಿ ಸೌಮ್ಯ ಭಂಡಾರಿ (28) ಕೊನೆಯುಸಿರೆಳೆದಿದ್ದು, ಇಂದು ಬೆಳಗ್ಗೆ ಯುವಕ ಸಂದೇಶ್ ಕುಲಾಲ್ ಸಾವನ್ನಪ್ಪಿದ್ದಾನೆ.
ಮೆಡಿಕಲ್ನಲ್ಲಿ ಕೆಲಸ ಮಾಡುತ್ತಿರುವ ಸಂದೇಶ್ ನಿನ್ನೆ ಸೌಮ್ಯಾಳ ಸ್ಕೂಟಿ ತಡೆದು ನಿಲ್ಲಿಸಿ, ಆಕೆಯ ಕತ್ತು ಸೀಳಿದ್ದ ಘಟನೆ ಉಡುಪಿಯ ಸಂತೆಕಟ್ಟೆ ಬಳಿ ನಡೆದಿತ್ತು. ಆಕೆ ಕುಸಿದು ಬೀಳುತ್ತಿದ್ದಂತೆಯೇ ತಾನೂ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಚಿಕಿತ್ಸೆ ಫಲಿಸದೇ ಇಬ್ಬರೂ ಮೃತಪಟ್ಟಿದ್ದಾರೆ.