ಉಡುಪಿ: ಪ್ಲಾಸ್ಟಿಕ್‌ನಿಂದಾಗಿ ಪರಿಸರ ಮತ್ತು ಜೀವ ವೈವಿಧ್ಯತೆ ಮೇಲಾಗ್ತಿರುವ ಹಾನಿಯ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರೂ ಅದರ ಬಳಕೆ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಇದೇ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿಯೇ ಗೋವು ಮತ್ತು ಕರು ಉಡುಪಿಯಲ್ಲಿ ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ.
ತಿನ್ನಬಾರದನ್ನ ತಿಂದು ಗೋವು ಮತ್ತು ಕರು ಸಾವು.. ಹೊಟ್ಟೆಯಲ್ಲಿತ್ತು ಕೆಜಿಗಟ್ಟಲೇ ಪ್ಲಾಸ್ಟಿಕ್ ತ್ಯಾಜ್ಯ.. - ಪ್ಲಾಸ್ಟಿಕ್ ಸೇವಿಸಿ ದನ ಹಾಗು ಕರುವೊಂದು ಮೃತ
ಪ್ರತಿನಿತ್ಯ ಪ್ಲಾಸ್ಟಿಕ್ನಿಂದಾಗುವ ಅನಾಹುತಗಳನ್ನು ತಿಳಿಯುತ್ತಿದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಪ್ಲಾಸ್ಟಿಕ್‌ನಿಂದಾಗಿ ಸಾಕಷ್ಟು ಅನಾಹುತಗಳು ನಡೆಯುತ್ತಲೇ ಇವೆ. ಇದಕ್ಕೆ ತಾಜಾ ಉದಾಹರಣೆ ಮಣಿಪಾಲದಲ್ಲಿ ಪ್ಲಾಸ್ಟಿಕ್ ಸೇವಿಸಿ ಗೋವು ಹಾಗೂ ಕರುವೊಂದು ಮೃತಪಟ್ಟಿದೆ.
ಮೃತ ಹಸುವಿನ ಹೊಟ್ಟೆಯಲ್ಲಿ ಕೆಜಿಗಟ್ಟಲೇ ಪ್ಲಾಸ್ಟಿಕ್
ಉಡುಪಿಯ ಮಣಿಪಾಲದ ಈಶ್ವರನಗರದಲ್ಲಿ ಒಂದು ಗೋವು ಹಾಗೂ ಕರುವೊಂದು ಮೃತಪಟ್ಟಿವೆ. ಕೂಡಲೇ ಸ್ಥಳೀಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಮೃತಪಟ್ಟ ಗೋವಿನ ಮರಣೋತ್ತರ ಪರೀಕ್ಷೆಯನ್ನ ಸ್ಥಳದಲ್ಲೇ ನಡೆಸಿದಾಗ, ಅದರ ಹೊಟ್ಟೆಯಲ್ಲಿ ಕೆಜಿಗಟ್ಟಲೇ ಪ್ಯಾಸ್ಟಿಕ್ ಸಹಿತ ತ್ಯಾಜ್ಯ ಕಂಡು ಬಂದಿದೆ.
ಇದು ಸಹಜವಾಗೇ ಆತಂಕ ಸೃಷ್ಟಿಸಿದ್ದರೂ ಪ್ಲಾಸ್ಟಿಕ್ ಈ ಪ್ರಮಾಣದಲ್ಲಿ ಗೋವಿನ ಹೊಟ್ಟೆ ಸೇರಿರೋದು ಹೇಗೆ ಅನ್ನೋದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.