ಕರ್ನಾಟಕ

karnataka

ETV Bharat / state

ಉಡುಪಿಯ ಸ್ವರ್ಣ ನದಿಯಲ್ಲಿ ಕೊಳಲನೂದುವ ಕೃಷ್ಣನ ಮೂರ್ತಿ ಪತ್ತೆ! - statue

ಸ್ವರ್ಣ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕನೊಬ್ಬನಿಗೆ ಸುಮಾರು 8 ಕೆಜಿ ತೂಕದ ಕೃಷ್ಣನ ಮೂರ್ತಿ ಸಿಕ್ಕಿದೆ.

lord krishna statue found in swarna river
ಕೃಷ್ಣನ ಮೂರ್ತಿ ಪತ್ತೆ

By

Published : Sep 2, 2020, 12:06 AM IST

ಉಡುಪಿ: ಉಡುಪಿಯ ಸ್ವರ್ಣ ನದಿಯಲ್ಲಿ ಕೊಳಲನೂದುವ ಕೃಷ್ಣನ ಮೂರ್ತಿಯೊಂದು ಮೀನಿಗೆ ಗಾಳ ಹಾಕುವಾಗ ಯುವಕನೊಬ್ಬನಿಗೆ ಸಿಕ್ಕಿದ್ದು, ಇದು ಎಲ್ಲಿಯ ಮೂರ್ತಿ ಎನ್ನುವ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಕೃಷ್ಣನ ಮೂರ್ತಿ ಪತ್ತೆ
ಉಡುಪಿ ಅಂದ್ರೆ ಮೊದಲು ನೆನಪಿಗೆ ಬರುವುದೇ ಕಡೆಗೋಲು ಕೃಷ್ಣ. ಕೃಷ್ಣ ದರ್ಶನಕ್ಕೆ ಅಂತ ದೇಶ ವಿದೇಶಗಳಿಂದಲೂ ಬರುತ್ತಾರೆ. ಈಗ ಅದೇ ಕೃಷ್ಣನ ಊರಿನ ನದಿಯೊಂದರಲ್ಲಿ ಮತ್ತೊಂದು ಕೃಷ್ಣ ಸಿಕ್ಕಿದ್ದಾನೆ. ಅದು ಸ್ವರ್ಣ ನದಿಯಲ್ಲಿ.

ಹೌದು, ಉಡುಪಿಯ ಬೆಳ್ಳಂಪಳ್ಳಿಯ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳಗೆ ಸೋಮವಾರ ರಾತ್ರಿ ಎಂಟು ಗಂಟೆಯ ವೇಳೆ ಇಲ್ಲಿನ ಕೆಲವು ಯುವಕರು ಮೀನಿಗೆ ಗಾಳ ಹಾಕುತ್ತಿದ್ದರು. ಹೀಗೆ ಗಾಳ ಹಾಕುತ್ತಿದ್ದಾಗ ಅವರಿಗೆ ನದಿಯಲ್ಲಿ ಹೊಳೆಯುತ್ತಿರುವ ವಸ್ತುವೊಂದು ಅವರ ಕಣ್ಣಿಗೆ ಬಿದ್ದು, ಏನಿರಬಹುದು ಅಂತ ಅಚ್ಚರಿಗೊಂಡು, ಯುವಕರ ತಂಡದಲ್ಲಿದ್ದ ರಿತೇಶ್ ಎನ್ನುವ ಯುವಕ ನದಿಗೆ ಜಿಗಿದು ಹೊಳೆಯುವ ಮೂರ್ತಿಯನ್ನು ಮೇಲಕ್ಕೆ ತಂದಿದ್ದಾನೆ.
ಕೃಷ್ಣನ ಮೂರ್ತಿ ಪತ್ತೆ

ಇನ್ನೂ ಈ ಮೂರ್ತಿ ಸಿಕ್ಕಿದ ನಂತರ ಸ್ಥಳೀಯ ಹಿರಿಯಡ್ಕ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಈ ಕೊಳಲನೂದುವ ಮೂರ್ತಿ ಸುಮಾರು 8 ಕೆಜಿ ತೂಕವಿದ್ದು, ಸದ್ಯ ಪೊಲೀಸ್​ ಠಾಣೆಯಲ್ಲಿ ಇರಿಸಿದ್ದಾರ. ಆದರೆ ಈ ಬಗ್ಗೆ ಇತಿಹಾಸ ತಜ್ಜರೊಬ್ಬರು ಹೇಳುವ ಪ್ರಕಾರ ಮೂರ್ತಿಯನ್ನು ಚಿತ್ರದಲ್ಲಿ ನೋಡಿದಾಗ, ಅದು ತೀರಾ ಹಳೆಯ ಮೂರ್ತಿಯ ಹಾಗಿಲ್ಲ ಇತ್ತೀಚಿನ ಮೂರ್ತಿ ಹಾಗಿದೆ.. ಅಂಗಡಿಯಿಂದ ತಂದು ಮನೆಯಲ್ಲಿ ಇಟ್ಟಾಗ, ಮೂರ್ತಿಯಿಂದ ಏನಾದರೂ ತೊಂದರೆ ಆಗಬಹುದು ಅಂತ ಹೆದರಿ ಕೂಡ ಎಸೆದಿರುವ ಸಾಧ್ಯತೆ ಇದೆ ಎನ್ನುತ್ತಾರೆ.. ಸದ್ಯ ಈ ವಿಗ್ರಹ ಹಿರಿಯಡ್ಕ ಠಾಣೆಯಲ್ಲಿ ಇದ್ದು ತನಿಖೆ ನಡೆಸಲಾಗುತ್ತಿದೆ.

ABOUT THE AUTHOR

...view details