ಉಡುಪಿ:ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸದ ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಭಾಸ್ಕರ್ ಬಿ. ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಉಡುಪಿಯ ವಿವಿಧ ಇಲಾಖೆಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ ಕುಂದಾಪುರ ಪುರಸಭೆ, ಎಸಿ ಕಚೇರಿ, ಎಪಿಎಂಸಿ ಮಾರುಕಟ್ಟೆಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿದ್ದಾರೆ. ಕೊರೊನಾ ತಡೆಗಟ್ಟುವಿಕೆಗೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾಸ್ಕ್ ಧರಿಸದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಥರ್ಮಲ್ ಸ್ಕ್ಯಾನರ್ ಇಲ್ಲ, ಭೇಟಿ ಕೊಟ್ಟವರ ದಾಖಲೆಯೂ ನಿರ್ವಹಣೆ ಮಾಡಿಲ್ಲದ ಕುರಿತು ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಎಸಿ ಕಚೇರಿಯಲ್ಲಿ ಕರ್ತವ್ಯಲೋಪದ ಕುರಿತು ಗರಂ ಆದ ಲೋಕಾಯುಕ್ತರು, ಹಾಜರಾತಿ ಪುಸ್ತಕದಲ್ಲಿ ಸಹಿಯೇ ಹಾಕದಿರುವ ಕೆಲವು ಸಿಬ್ಬಂದಿಗೆ ಮೆಮೋ ನೀಡಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಭಾಸ್ಕರ್ ಹಾಗೂ ಇತರೆ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದರು.