ಕರ್ನಾಟಕ

karnataka

ETV Bharat / state

ಉಡುಪಿ ಜಿಲ್ಲೆಯ ಟೋಲ್​​​​ಗೇಟ್​​ಗಳಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡಬೇಕು: ಶಾಸಕ ರಘುಪತಿ ಭಟ್ - udupi latest update news

ಉಡುಪಿ ಜಿಲ್ಲೆಯ ಟೋಲ್​​​​ಗೇಟ್​​ಗಳಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡಬೇಕು ಎಂದು ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.

MLA Raghupati Bhat
ಶಾಸಕ ರಘುಪತಿ ಭಟ್

By

Published : Dec 31, 2020, 8:00 PM IST

ಉಡುಪಿ:ಜ.1ರಿಂದ ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಟೋಲ್​ಗಳ ಕಡ್ಡಾಯ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಆಡಳಿತ ಪಕ್ಷದವರೇ ವಿರೋಧಿಸಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್, ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಆದೇಶವನ್ನು ಖಂಡಿಸಿದ್ದಾರೆ.

ಶಾಸಕ ರಘುಪತಿ ಭಟ್

ಈ ಬಗ್ಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಟೋಲ್ ಗೇಟ್​​ಗಳಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದ ವಿನಾಯಿತಿ ನೀಡಲೇಬೇಕು. ಜನಪ್ರತಿನಿಧಿಗಳ ಅಭಿಪ್ರಾಯವನ್ನು ಸಂಗ್ರಹಿಸದೇ ಉಡುಪಿ ಜಿಲ್ಲಾಧಿಕಾರಿಗಳು ಫಾಸ್ಟ್​ ಟ್ಯಾಗ್​ ಕಡ್ಡಾಯ ಮಾಡುವುದಾಗಿ ಹೇಳಿದ್ದಾರೆ. ಜ.1ರಿಂದ ಫಾಸ್ಟ್​ ಟ್ಯಾಗ್ ಕಡ್ಡಾಯ ಮಾಡುವುದಕ್ಕೆ ಮತ್ತು ಸ್ಥಳೀಯರಿಗೆ ವಿನಾಯಿತಿ ನೀಡದೇ ಇರುವುದಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.

ಓದಿ: ಫಾಸ್ಟ್​ಟ್ಯಾಗ್​ ಕಡ್ಡಾಯ ಗಡುವು ಮತ್ತೆ ಮುಂದೂಡಿಕೆ ಮಾಡಿದ ಸಾರಿಗೆ ಸಚಿವಾಲಯ!

ಟೋಲ್ ಗೇಟ್​​ಗಳಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ನೇಮಕ ಮಾಡಿರುವುದು ಖಂಡನೀಯ. ಕಡಿಮೆ ಸಂಬಳಕ್ಕೆ ಲಭ್ಯರಾಗುತ್ತಾರೆ ಎಂಬ ಕಾರಣಕ್ಕೆ ಆ ಭಾಗದ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ‌. ಟೋಲ್ ಗೇಟ್​​​ಗಳಲ್ಲಿ ಸ್ಥಳೀಯ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು ಎಂದು ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.

ABOUT THE AUTHOR

...view details