ಕರ್ನಾಟಕ

karnataka

ETV Bharat / state

ಬ್ರಹ್ಮಾವರ ಬಳಿ ಐತಿಹಾಸಿಕ ಚೌಳಿ ಕೆರೆಗೆ ಕಾರು ಉರುಳಿ ಉದ್ಯಮಿ ಸಾವು - ಉಡುಪಿಯಲ್ಲಿ ಅಪರಾಧ ಸುದ್ದಿ

ಕೆರೆಗೆ ಕಾರು ಉರುಳಿ, ಸ್ಥಳೀಯ ಉದ್ಯಮಿಯೊಬ್ಬರು ಸಾವನ್ನಪ್ಪಿರುವ ಘಟನೆ ಬ್ರಹ್ಮಾವರ ಬಳಿಯಿರುವ ಇತಿಹಾಸ ಪ್ರಸಿದ್ಧ ಚೌಳಿ ಕೆರೆಯಲ್ಲಿ ನಡೆದಿದೆ.

car accident
ಕಾರು ಅಪಘಾತ

By

Published : Jun 22, 2020, 6:48 AM IST

ಉಡುಪಿ:ಬ್ರಹ್ಮಾವರ ತಾಲೂಕು ಬಾರ್ಕೂರು ಬಳಿಯಿರುವ ಐತಿಹಾಸಿಕ ಚೌಳಿ ಕೆರೆಗೆ ಕಾರೊಂದು ಉರುಳಿಬಿದ್ದ ಪರಿಣಾಮ ಸ್ಥಳೀಯ ಉದ್ಯಮಿ‌ಯೊಬ್ಬರು ಸಾವನ್ನಪ್ಪಿದ್ದಾರೆ.

ಕಾರು ಅಪಘಾತ

ಪ್ಲೈವುಡ್ ಅಂಗಡಿ ಮಾಲೀಕ ಸಂತೋಷ ಶೆಟ್ಟಿ ಮೃತರು. ಬಾರ್ಕೂರಿನಿಂದ ಸೈಬರ್ ಕಟ್ಟೆ ಮಾರ್ಗದಲ್ಲಿ ಬರುವ ವೇಳೆ ಈ ಅವಘಡ ಸಂಭವಿಸಿದೆ. ತಿರುವಿನಲ್ಲಿ ಇರುವ ಕೆರೆಗೆ ತಡೆಗೋಡೆಗಳು ಇಲ್ಲದ ಕಾರಣದಿಂದ ಅವಘಡ ನಡೆದಿದೆ ಎನ್ನಲಾಗ್ತಿದೆ.

ಕಾರು ಅಪಘಾತ

ಸ್ಥಳೀಯರ ನೆರವಿನಿಂದ ಕಾರಿನಲ್ಲಿದ್ದ ಸಂತೋಷ್ ಶೆಟ್ಟಿಯನ್ನು ರಕ್ಷಿಸುವ ಯತ್ನ ನಡೆದಿತ್ತಾದರೂ, ಅಷ್ಟರಲ್ಲಿ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ABOUT THE AUTHOR

...view details