ಹುಲಿ ವೇಷಧಾರಿ ಕಲಾವಿದರೊಂದಿಗೆ ಪುಟ್ಟ ಬಾಲಕಿಯೊಬ್ಬಳು ಹೆಜ್ಜೆ ಹಾಕಿದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಚಿಕ್ಕ ಬಾಲಕಿಯ ಪುಟಾಣಿ ಹೆಜ್ಜೆಗಳಿಗೆ ನೆಟ್ಟಿಜನ್ಸ್ ಮನಸೋತು ಮನದುಂಬಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ವಿಸಿಟ್ ಉಡುಪಿ' ಎಂಬ ಟ್ವಿಟರ್ ಖಾತೆಯಲ್ಲಿ ಬಾಲಕಿಯ ಹುಲಿ ಕುಣಿತದ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ರಸ್ತೆಯಲ್ಲಿ ನೃತ್ಯ ಮಾಡುತ್ತಿದ್ದ ಹುಲಿ ವೇಷಧಾರಿಗಳಿಗೆ ಬಾಲಕಿಯ ತಾಯಿ ಹಾರ ಹಾಕಿ ಗೌರವಿಸುತ್ತಾರೆ. ಈ ಸಂದರ್ಭದಲ್ಲಿ ತಾಯಿ ಜೊತೆಗಿದ್ದ ಬಾಲಕಿಯನ್ನು ಹುಲಿ ವೇಷಧಾರಿಯೊಬ್ಬರು ಕರೆದು ಹೆಜ್ಜೆ ಹಾಕುತ್ತಾರೆ. ಕಲಾವಿದನ ಕುಣಿತಕ್ಕೆ ಬಾಲಕಿ ಕೂಡ ಹೆಜ್ಜೆ ಹಾಕಿರುವುದು ರೋಮಾಂಚನ ಉಂಟು ಮಾಡುತ್ತದೆ.