ಉಡುಪಿ:ಮಲ್ಪೆ ಕಡಲ ತೀರದಲ್ಲಿ ನೀರು ಪಾಲಾಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಸ್ಥಳೀಯರ ಎಚ್ಚರಿಕೆ ನಿರ್ಲಕ್ಷಿಸಿ ನೀರಿಗೆ ಇಳಿದಿದ್ದ ಮೂವರು ಪ್ರವಾಸಿಗರು ಈಜುತ್ತಾ ಕಡಲಿನ ಆಳಕ್ಕೆ ಹೋಗಿ ಮುಳುಗುವ ಹಂತದಲ್ಲಿದ್ದರು. ಈ ಸಂದರ್ಭದಲ್ಲಿ ಲೈಫ್ ಗಾರ್ಡ್ಗಳು ಕಾರ್ಯಪ್ರವೃತ್ತರಾಗಿ ಆಗಬಹುದಾದ ದುರಂತವನ್ನು ತಪ್ಪಿಸಿದ್ದಾರೆ.
ಮಲ್ಪೆಯಲ್ಲಿ ತಪ್ಪಿದ ದುರಂತ: ಕಡಲಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ - ಉಡುಪಿ ಸುದ್ದಿ
ಸ್ಥಳೀಯರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗೆ ಇಳಿದಿದ್ದ ಮೂವರು ಪ್ರವಾಸಿಗರು ಈಜುತ್ತಾ ಕಡಲಿನ ಆಳಕ್ಕೆ ಹೋಗಿ ಮುಳುಗುವ ಹಂತದಲ್ಲಿದ್ದರು. ಈ ಸಂದರ್ಭದಲ್ಲಿ ಲೈಫ್ ಗಾರ್ಡ್ಗಳು ಕಾರ್ಯಪ್ರವೃತ್ತರಾಗಿ ಆಗಬಹುದಾದ ದುರಂತವನ್ನು ತಪ್ಪಿಸಿದ್ದಾರೆ.
ಕಡಲಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ
ಕಲಬುರಗಿಯ ಅನಿಲ್ ಕುಮಾರ್, ಅಬ್ಬಾಸ್ ಅಲಿ ಮತ್ತು ನಿತಿನ್ ಮಂಡ್ಯ ರಕ್ಷಿಸಲ್ಪಟ್ಟ ಪ್ರವಾಸಿಗರು. ಜೀವರಕ್ಷಕ ದಳದ ಮಧು ಎಂಬವರು ಜೆಟ್ಸ್ಕಿ ಬೋಟ್ ಬಳಸಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ.
Last Updated : Sep 24, 2021, 8:07 AM IST