ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಜನತೆಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆ - Leopard in Udupi district

ಉಡುಪಿ ಜಿಲ್ಲೆಯಲ್ಲಿ ಜನತೆಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಕುದುರೆಮುಖ ವನ್ಯಜೀವಿ ಅರಣ್ಯಕ್ಕೆ ಬಿಟ್ಟಿದ್ದಾರೆ.

Leopard in Udupi district
ಉಡುಪಿಯಲ್ಲಿ ಜನತೆಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆ

By

Published : Feb 25, 2021, 6:36 PM IST

ಉಡುಪಿ: ಕೊಕ್ಕರ್ಣೆ ಸಮೀಪದ ಕುದಿ ಗ್ರಾಮದ ಹೊಸಳ್ಳಿಯಲ್ಲಿ ತೋಟಕ್ಕೆ ನುಗ್ಗಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿಯಲ್ಲಿ ಜನತೆಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆ

ಈ ಭಾಗದಲ್ಲಿ ನಿರಂತರ ಚಿರತೆ ಕಾಟ ಇದ್ದ ಹಿನ್ನೆಲೆ ಹೆಬ್ರಿ ವಲಯ ಅರಣ್ಯ ಅಧಿಕಾರಿಗಳು ಕಬ್ಬಿಣದ ಬೋನ್​ ಇರಿಸಿದ್ದರು. ಈಗ ಸೆರೆಯಾಗಿರುವ ಚಿರತೆಯನ್ನು ಕುದುರೆಮುಖ ವನ್ಯಜೀವಿ ಅರಣ್ಯಕ್ಕೆ ಬಿಡಲಾಗಿದೆ.

ಈ ಚಿರತೆ ಮೂವತ್ತಕ್ಕೂ ಅಧಿಕ ಕೋಳಿಗಳು ಹಾಗೂ ಎರಡು ನಾಯಿ ಕೊಂದು ಹಾಕಿದ್ದರಿಂದ ಈ ಭಾಗದ ಜನರು ಭಯಭೀತರಾಗಿದ್ದರು. ಈಗ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ABOUT THE AUTHOR

...view details