ಉಡುಪಿ:ಅಯೋಧ್ಯೆ ಭಗವಾನ್ ಶ್ರೀ ರಾಮ ದೇವರ ಭವ್ಯ ಮಂದಿರದ ನಿರ್ಮಾಣ ಕಾರ್ಯವನ್ನು ಎಲ್ ಆಂಡ್ ಟಿ ಮತ್ತು ಟಾಟಾ ಸಂಸ್ಥೆಗೆ ಒಪ್ಪಿಸಿರುವುದಾಗಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯ ಎಲ್ ಆಂಡ್ ಟಿ ಮತ್ತು ಟಾಟಾ ಸಂಸ್ಥೆಗೆ: ವಿಶ್ವಪ್ರಸನ್ನ ತೀರ್ಥರು - L&T and Tata company will construct of Ayodhya Ram Mandir
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಜವಾಬ್ದಾರಿಯನ್ನು ಎಲ್ ಆಂಡ್ ಟಿ ಮತ್ತು ಟಾಟಾ ಸಂಸ್ಥೆಗೆ ಒಪ್ಪಿಸಲಾಗಿದೆ. ರಾಮಮಂದಿರದ ಕಾರ್ಯದರ್ಶಿ ಚಂಪತ್ ರಾಯ್ ಟ್ರಸ್ಟ್ ಕಡೆಯಿಂದ ನಿರ್ಮಾಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಉತ್ತರ ಭಾರತದ ಪ್ರವಾಸದಲ್ಲಿರುವ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಸಂತ ಸಮಾವೇಶದಲ್ಲಿ ಭಾಗಿಯಾದ ವಿಶ್ವಪ್ರಸನ್ನ ತೀರ್ಥರು, ರಾಮಮಂದಿರ ನಿರ್ಮಾಣದ ಬಗ್ಗೆ ಸಮಾಲೋಚನೆ ನಡೆಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಮಂದಿರ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ಎಲ್ ಆಂಡ್ ಟಿ ಕಂಪನಿಗೆ ವಹಿಸಲಾಗಿದೆ. ಕಾಮಗಾರಿಯ ಮೇಲುಸ್ತುವಾರಿಯನ್ನು ಟಾಟಾ ಕಂಪನಿಗೆ ನೀಡಲಾಗಿದೆ. ಈ ಎರಡು ಜವಾಬ್ದಾರಿಯನ್ನು ಎರಡು ಕಂಪನಿಗಳು ಒಪ್ಪಿಕೊಂಡಿದೆ. ರಾಮಮಂದಿರದ ಕಾರ್ಯದರ್ಶಿ ಚಂಪತ್ ರಾಯ್ ಟ್ರಸ್ಟ್ ಕಡೆಯಿಂದ ನಿರ್ಮಾಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.