ಉಡುಪಿ:ಅಮಾಸೆಬೈಲು ಪೊಲೀಸ್ ಠಾಣೆಯ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಬ್ಬಂದಿ, ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಎಸ್ಆರ್ಪಿ (IRB) ಸಿಬ್ಬಂದಿ ಮಲ್ಲಿಕಾರ್ಜುನ್ ಗುಬ್ಬಿ (56) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭದ್ರತೆಗಾಗಿ ನಿಯೋಜನೆಗೊಂಡಿದ್ದ ಕೆಎಸ್ಆರ್ಪಿ ಸಿಬ್ಬಂದಿ ಆತ್ಮಹತ್ಯೆ.! - ಅಮಾಸೆಬೈಲು ಪೊಲೀಸ್ ಠಾಣೆಯ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಬ್ಬಂದಿ ಆತ್ಮಹತ್ಯೆ
ಭದ್ರತೆಗಾಗಿ ನಿಯೋಜನೆಗೊಂಡಿದ್ದ ಕೆಎಸ್ಆರ್ಪಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
![ಭದ್ರತೆಗಾಗಿ ನಿಯೋಜನೆಗೊಂಡಿದ್ದ ಕೆಎಸ್ಆರ್ಪಿ ಸಿಬ್ಬಂದಿ ಆತ್ಮಹತ್ಯೆ.! KSRP staff committed suicide in udupi](https://etvbharatimages.akamaized.net/etvbharat/prod-images/768-512-7396270-thumbnail-3x2-smk.jpg)
ಭದ್ರತೆಗಾಗಿ ನಿಯೋಜನೆಗೊಂಡಿದ್ದ ಕೆಎಸ್ ಆರ್ಪಿ ಸಿಬ್ಬಂದಿ ಆತ್ಮಹತ್ಯೆ
ಕಲಬುರಗಿಯ ನೌರುಗಂಜ್ ನಿವಾಸಿಯಾದ ಮಲ್ಲಿಕಾರ್ಜುನ್, ಮೇ 16 ರಂದು ನಕ್ಸಲ್ ಪೀಡಿತ ಅಮಾಸೆಬೈಲು ಠಾಣೆಗೆ ಭದ್ರತೆಗಾಗಿ ನಿಯೋಜನೆಯಾಗಿದ್ದರು. ಮೂರು ತಿಂಗಳ ಹಿಂದೆ ಕೊಪ್ಪಳದ ಮುನಿರಾಬಾದ್ಗೆ ವರ್ಗಾವಣೆಗೊಂಡಿದ್ದ ಇವರು, ಶನಿವಾರ ಮುನಿರಾಬಾದ್ಗೆ ತೆರಳುವವರಿದ್ದರು. ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.