ಉಡುಪಿ :ಇಂದು ದಶಮಿ ಪ್ರಯುಕ್ತ ಕಡಗೋಲು ಕೃಷ್ಣನ ಮಠದಲ್ಲಿ ದೇವರ ಬಿಂಬಕ್ಕೆ ಮಹಾಭಿಷೇಕ ನಡೆಸಲಾಯಿತು. ಕಳೆದ ನಾಲ್ಕು ಶತಮಾನಗಳಿಂದ ಈ ಅಪರೂಪದ ಪೂಜಾಪದ್ಧತಿ ನಡೆದು ಬಂದಿದೆ.
ದಶಮಿ ಪ್ರಯುಕ್ತ ಕಡಗೋಲು ಕೃಷ್ಣನ ಮಠದಲ್ಲಿ ದೇವರ ಬಿಂಬಕ್ಕೆ ಮಹಾಭಿಷೇಕ.. - ಕಡಗೋಲು ಕೃಷ್ಣನ ಮಠ
ವರ್ಷವಿಡೀ ನಡೆಸುವ ಪೂಜೆಯ ವೇಳೆ ಆಗಿರಬಹುದಾದ ಎಲ್ಲಾ ದೋಷಗಳನ್ನು ನಿವಾರಣೆ ಮಾಡುವ ಸಲುವಾಗಿ ಈ ಅಭಿಷೇಕವನ್ನು ನಡೆಸಲಾಗುತ್ತದೆ..
ಲಾಕ್ಡೌನ್ನಿಂದ ಕೃಷ್ಣ ಮಠ ಮುಚ್ಚಿದ್ರೂ ಈ ಸಾಂಪ್ರದಾಯಿಕ ಆಚರಣೆಗೆ ಭಂಗ ಬಂದಿಲ್ಲ. ಪರ್ಯಾಯ ಮಠಾಧೀಶರಾದ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ಕೃಷ್ಣ ದೇವರ ಮೂರ್ತಿಗೆ ಅಭಿಷೇಕವನ್ನು ನಡೆಸಲಾಯಿತು. ಕಳಶಗಳಲ್ಲಿ ತುಂಬಿದ ನೀರನ್ನು ದೇವಜಲ ಎಂದು ಕರೆಯುತ್ತಾರೆ. ಕೃಷ್ಣನಿಗೆ ಈ ನೀರಿನಿಂದಲೇ ಅಭಿಷೇಕ ಮಾಡಲಾಗುತ್ತದೆ. ಇದೇ ವೇಳೆ ಪಂಚಾಮೃತ ಅಭಿಷೇಕವೂ ನಡೆಯುತ್ತದೆ. ಬಿಂಬದಲ್ಲಿರುವ ದೇವ ಕಳೆಯನ್ನು ಹೆಚ್ಚಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
ಜೊತೆಗೆ ವರ್ಷವಿಡೀ ನಡೆಸುವ ಪೂಜೆಯ ವೇಳೆ ಆಗಿರಬಹುದಾದ ಎಲ್ಲಾ ದೋಷಗಳನ್ನು ನಿವಾರಣೆ ಮಾಡುವ ಸಲುವಾಗಿ ಈ ಅಭಿಷೇಕವನ್ನು ನಡೆಸಲಾಗುತ್ತದೆ. ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಭಾಗವಹಿಸಿದ್ದರು.