ಕರ್ನಾಟಕ

karnataka

ETV Bharat / state

ಕನ್ನಡ ಬೋರ್ಡ್ ಇನ್ನೂ ತಯಾರಾಗಿಲ್ವಂತೆ.. ಆದ್ಮೇಲೆ ತುಳು, ಸಂಸ್ಕೃತದ ಮೇಲೆ ಹಾಕ್ತಾರಂತೆ.. - udupi krishna Math

ಉಡುಪಿ ಕೃಷ್ಣ ಮಠ ಪುನಶ್ಚೇತನಗೊಳಿಸಲಾಗುತ್ತಿದೆ. ಹಾಗಾಗಿ, ಕನ್ನಡದ ಬೋರ್ಡ್ ತೆಗೆದಿದ್ದು, ಮರದ ಬೋರ್ಡ್​ ಹಾಕಲಾಗುತ್ತದೆ. ಕನ್ನಡ ಬೋರ್ಡ್ ಸಿದ್ಧವಾದ ಕೂಡಲೇ ಅದನ್ನ ಮೇಲ್ಭಾಗದಲ್ಲಿ ಅಳವಡಿಸುತ್ತೇವೆ..

ಕೃಷ್ಣ ಮಠವನ್ನು ಪುನಶ್ಚೇತನಗೊಳಿಸಿದ ಕಲಾವಿದ ಪುರುಷೋತ್ತಮ ಅಡ್ವೆ
ಕೃಷ್ಣ ಮಠವನ್ನು ಪುನಶ್ಚೇತನಗೊಳಿಸಿದ ಕಲಾವಿದ ಪುರುಷೋತ್ತಮ ಅಡ್ವೆ

By

Published : Dec 1, 2020, 4:49 PM IST

Updated : Dec 1, 2020, 5:00 PM IST

ಉಡುಪಿ :ಶ್ರೀಕೃಷ್ಣ ಮಠದ ಬೋರ್ಡ್ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ ಬಂದಿದೆ. ಉಡುಪಿ ಕೃಷ್ಣ ಮಠವನ್ನು ಪುನಶ್ಚೇತನ ಗೊಳಿಸಲಾಗುತ್ತಿದೆ. ಹಾಗಾಗಿ, ಪ್ಲಾಸ್ಟಿಕ್ ಬೋರ್ಡ್ ತೆಗೆಯಲಾಗಿದೆ.

ಮುಂದೆ ಮರದ ಬೋರ್ಡ್​ ತಯಾರಿಸಿ ಅಳವಡಿಸುವ ಯೋಜನೆ ಇದ್ದು, ದ್ವಾರದ ಮೇಲ್ಭಾಗದಲ್ಲಿ ಕನ್ನಡ ಬೋರ್ಡ್ ಅಳವಡಿಸುತ್ತೇವೆ. ಕೆಳಭಾಗದಲ್ಲಿ ಸಂಸ್ಕೃತ, ತುಳುವಿನಲ್ಲಿ ಬೋರ್ಡ್ ಅಳವಡಿಸಲಾಗುವುದು ಎಂದು ಪರ್ಯಾಯ ಅದಮಾರು ಮಠಾಧೀಶರು ಹೇಳಿದ್ದಾರೆ.

ಕೃಷ್ಣ ಮಠವನ್ನು ಪುನಶ್ಚೇತನಗೊಳಿಸಿದ ಕಲಾವಿದ ಪುರುಷೋತ್ತಮ ಅಡ್ವೆ

ಬೋರ್ಡ್ ಕಾಮಗಾರಿ ಪೂರ್ಣಗೊಳ್ಳುವ ಮೊದಲು ಲಕ್ಷದೀಪೋತ್ಸವ ಬಂದಿದೆ. ಹಾಗಾಗಿ, ಕನ್ನಡದ ಬೋರ್ಡ್ ತಯಾರಾಗಬೇಕಾಗಿದೆ. ಸಂಸ್ಕೃತ ಮತ್ತು ತುಳುವಿನ ಬೋರ್ಡ್ ಮೊದಲೇ ಸಿದ್ಧವಾಗಿರುವ ಕಾರಣ ಅದನ್ನು ಅಳವಡಿಸಲಾಗಿದೆ.

ತುಳುವಿಗೆ ಮಾನ್ಯತೆ ಕೊಡುವ ಉದ್ದೇಶದಿಂದ ಈ ಬೋರ್ಡ್ ಅಳವಡಿಸಲಾಗಿದೆ. ಕನ್ನಡ ಬೋರ್ಡ್ ಸಿದ್ಧವಾದ ಕೂಡಲೇ ಅದನ್ನ ಮೇಲ್ಭಾಗದಲ್ಲಿ ಅಳವಡಿಸುತ್ತೇವೆ ಎಂದು ಕೃಷ್ಣ ಮಠವನ್ನು ಪುನಶ್ಚೇತನಗೊಳಿಸಿದ ಕಲಾವಿದ ಪುರುಷೋತ್ತಮ ಅಡ್ವೆ ಹೇಳಿದ್ದಾರೆ.

ಇದನ್ನು ಓದಿ:ವಕೀಲರಾಗಿದ್ದ ಸಿದ್ದರಾಮಯ್ಯ ಸಾಕ್ಷಿ ಇಟ್ಟು ಮಾತಾಡಲಿ: ಬಿ.ವೈ.ವಿಜಯೇಂದ್ರ ಸವಾಲ್

Last Updated : Dec 1, 2020, 5:00 PM IST

ABOUT THE AUTHOR

...view details