ಉಡುಪಿ:ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸ್ವಕ್ಷೇತ್ರ ಉಡುಪಿಯಲ್ಲಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ್ರು.
ಕೋಟ ಶ್ರೀನಿವಾಸ್ ಪೂಜಾರಿ ಸಚಿವರಾಗಿ ಅಧಿಕಾರ ಸ್ವೀಕಾರ ಹಿನ್ನೆಲೆ: ಸಂಭ್ರಮಾಚರಣೆ ಎರಡನೇ ಬಾರಿಗೆ ಸಚಿವರಾಗುತ್ತಿರುವ ಶ್ರೀನಿವಾಸ ಪೂಜಾರಿ 3ನೇ ಬಾರಿ ವಿಧಾನಪರಿತ್ ಸದಸ್ಯರಾಗಿದ್ದು, ಈಗ ಮತ್ತೆ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಕಿರು ಪರಿಚಯ:
ಕೌಟುಂಬಿಕ ಹಿನ್ನೆಲೆ:
ವಯಸ್ಸು 54 ವರ್ಷ
ಹುಟ್ಟೂರು: ಕೋಟಾ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿ ತಾಲೂಕು, ಉಡುಪಿ ಜಿಲ್ಲೆ
ಪತ್ನಿ ಶಾಂತಾ
3 ಮಂದಿ ಮಕ್ಕಳು
ವಿದ್ಯಾರ್ಹತೆ: 7ನೇ ತರಗತಿ
ವೃತ್ತಿಕೃಷಿ
ಖಾಯಂ ವಿಳಾಸ ಹಾಗೂ ದೂರವಾಣಿ ಸಂಖ್ಯೆ: ಕೋಟತಟ್ಟು ಗ್ರಾಮ, ಪೋಸ್ಟ್ ಕೋಟ, ಉಡುಪಿ ತಾಲೂಕು – 576221
9448327964
ತಾತ್ಕಾಲಿಕ ವಿಳಾಸ ಹಾಗೂ ದೂರವಾಣಿ ಸಂಖ್ಯೆ: 9448327964
ಇ-ಮೇಲ್: Shrinivaspoojari53@gmail.com
ರಾಜಕೀಯ ಸ್ಥಾನಮಾನಗಳು:
1993 ರಲ್ಲಿ ಗ್ರಾಮ ಪಂಚಾಯತ್ ಸದಸ್ಯ
1996 ರಲ್ಲಿ ತಾಲೂಕು ಪಂಚಾಯತ್ ಸದಸ್ಯ
2006 ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ವಿವಿಧ ಹುದ್ದೆ
2009 ರಲ್ಲಿ ಪ್ರಥಮ ಬಾರಿಗೆ ವಿಧಾನ ಪರಿಷತ್ತಿಗೆ ಸದಸ್ಯರಾಗಿ ನೇಮಕ
2012 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಸಚಿವರಾಗಿ ನೇಮಕ
2016 ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆ
2018 ರಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ
ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ
ಸಚಿವರ ಹವ್ಯಾಸಗಳೇನು?
ಸಾಹಿತ್ಯ, ಲೇಖನ ಮತ್ತು ಛಾಯಾಗ್ರಹಣ