ಉಡುಪಿ: ರಾಜ್ಯದಲ್ಲಿ ವರುಣರಾಯನ ಮುನಿಸಿಗೆ ಭೂಮಿ ಕಾದ ಕಬ್ಬಿಣದಂತಾಗಿದೆ. ಬಿಸಿಲ ಬೇಗೆಯಿಂದ ಕೆರೆ, ಬಾವಿಗಳು ಬತ್ತಿ ಹೋಗಿದ್ದು, ನೀರಿಗೆ ಹಾಹಾಕಾರ ಉಂಟಾಗಿದೆ. ಉಡುಪಿ ಜಿಲ್ಲೆ ಮೊದಲ ಬಾರಿಗೆ ಭಾಗಶಃ ಬರ ಎಂದು ಘೋಷಣೆಯಾಗಿದ್ದು ನೀರಿನ ಮೂಲಗಳ ರಕ್ಷಣೆಗೆ ಜಿಲ್ಲೆಯ ಜನತೆ ಎಚ್ಚೆತ್ತುಕೊಂಡಿದ್ದಾರೆ.
ಸ್ಥಳೀಯರಿಂದ ಶ್ರಮದಾನ: ಕೋಟ ಹಿರೇಮಹಾಲಿಂಗೇಶ್ವರ ಕಲ್ಯಾಣಿಗೆ ಕಾಯಕಲ್ಪ - undefined
ಕಾರಂತಜ್ಜನ ಊರು ಉಡುಪಿ ಜಿಲ್ಲೆಯ ಕೋಟದಲ್ಲಿ ಸಾರ್ವಜನಿಕರು ಕೋಟ ಮಹತೋಭಾರ ಹಿರೇಮಹಾಲಿಂಗೇಶ್ವರನ ಕಲ್ಯಾಣಿಗೆ ಕಾಯಕಲ್ಪ ನೀಡಲು ಮುಂದಾಗಿದ್ದು, ನೂರಾರು ಯುವಕರು ಈ ಶ್ರಮದಾನದಲ್ಲಿ ಪಾಲ್ಗೊಂಡಿದ್ದಾರೆ.

ಕೋಟ ಹಿರೇಮಹಾಲಿಂಗೇಶ್ವರ ಕಲ್ಯಾಣಿ ಕೆರೆಗೆ ಕಾಯಕಲ್ಪ
ಉಡುಪಿ ಜಿಲ್ಲೆಯ ಕಾರಂತಜ್ಜನ ಊರು ಕೋಟದಲ್ಲಿ ಸಾರ್ವಜನಿಕರು ಮತ್ತು ಯುವಕರು ಸೇರಿ ಕೋಟ ಮಹತೋಭಾರ ಹಿರೇ ಮಹಾಲಿಂಗೇಶ್ವರನ ಕಲ್ಯಾಣಿ ಕೆರೆ ಕಾಯಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನೂರಾರು ಯುವಕರು ಈ ಶ್ರಮದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕೋಟ ಹಿರೇಮಹಾಲಿಂಗೇಶ್ವರ ಕಲ್ಯಾಣಿ ಕೆರೆಗೆ ಕಾಯಕಲ್ಪ
ಹಳ್ಳಿ ಹಳ್ಳಿಗಳಲ್ಲಿ ಜಲ ಮೂಲದ ರಕ್ಷಣೆಗೆ ಯುವಜನತೆ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಂಡು ಕೆರೆ ಮತ್ತು ಕಲ್ಯಾಣಿಗಳ ಸಮೃದ್ಧಿಗೆ ಮುಂದಾಗಿದ್ದು ಎಲ್ಲರಿಗೂ ಪ್ರೇರಣೆಯಾಗಿದೆ.