ಕರ್ನಾಟಕ

karnataka

ETV Bharat / state

ಮುಕಾಂಬಿಕಾ ದೇವಸ್ಥಾನದ ನಕಲಿ ವೆಬ್​ಸೈಟ್​​ ಸೃಷ್ಟಿ... ಖದೀಮರು ಮಾಡಿದ್ದೇನು ಗೊತ್ತಾ? - ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವೆಬ್​ಸೈಟ್​

ಮೂಕಾಂಬಿಕೆ ದೇವಸ್ಥಾನದ ಅಧಿಕೃತ ವೆಬ್​ಸೈಟ್​ಅನ್ನೇ ನಕಲಿ ಮಾಡಿ ಭಕ್ತರಿಗೆ ದೋಖಾ ಮಾಡಿರುವುದು ಬಯಲಾಗಿದೆ.

kolluru mukhambika temple
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

By

Published : Nov 28, 2019, 8:46 PM IST

ಉಡುಪಿ:ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದೊಡ್ಡಮಟ್ಟದಲ್ಲಿ ದೋಖಾವೊಂದು ನಡೆದಿದ್ದು, ಅದೀಗ ಹೊರಬಿದ್ದಿದೆ.

ದೇವರಿಗೆ ದೋಖಾ

ಹೌದು, ಮುಜರಾಯಿ ಇಲಾಖೆಗೆ ಅತಿ ಹೆಚ್ಚು ವರಮಾನ ಇರುವ ದೇವಸ್ಥಾನಗಳಲ್ಲಿ ಮೂಕಾಂಬಿಕೆಯ ಸನ್ನಿಧಿಯೂ ಒಂದು. ಮೂಕಾಂಬಿಕೆ ದೇವಸ್ಥಾನದ ಸೇವೆಗಳನ್ನು, ಹೋಮ ಹವನಾದಿಗಳನ್ನು ಆನ್​​ಲೈನ್ ಮೂಲಕ ಭಕ್ತರು ಬುಕ್ ಮಾಡುವ ವ್ಯವಸ್ಥೆ ಈ ದೇವಾಲಯದಲ್ಲಿ ಇದೆ. ಆದರೆ ಇದೀಗ ದೇವಾಲಯದ ಅಧಿಕೃತ ವೆಬ್​ಸೈಟ್ಅ​ನ್ನೇ ನಕಲಿ ಮಾಡಿ ಭಕ್ತರಿಗೆ ದೋಖಾ ಮಾಡಿರುವ ದಂಧೆ ಬಯಲಾಗಿದೆ.

ಆನ್​ಲೈನ್​ ಮೂಲಕ ಹಣ ಸಂದಾಯ ಮಾಡಿದ ಭಕ್ತರಿಗೆ ಪೂಜೆ ಮಾಡಿಯೋ, ಮಾಡದೆಯೋ ಪ್ರಸಾದ ತಲುಪುತ್ತಿತ್ತು. ಆದ್ರೆ ಹಣ ಮಾತ್ರ ದೇವಸ್ಥಾನಕ್ಕೆ ಸಂದಾಯ ಆಗುತ್ತಿರಲಿಲ್ಲ. ದೇವಸ್ಥಾನದ ಇಓ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ಶುರು ಮಾಡಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಇದರಲ್ಲಿ ನೇರ ಶಾಮೀಲಾಗಿರುವ ಬಗ್ಗೆ ಸಂಶಯವಿದೆ.

ABOUT THE AUTHOR

...view details