ಉಡುಪಿ:ಕೋವಿಡ್ಎಲ್ಲ ವರ್ಗದ ಜನರಿಗೂ ಒಂದಿಲ್ಲೊಂದು ರೀತಿಯ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಮಂಗಳಮುಖಿಯರೂ ಕೂಡ ಹೊರತಾಗಿಲ್ಲ. ದಿನನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ಅನೇಕ ತೃತೀಯ ಲಿಂಗಿಗಳಿಗಿದೆ. ಹೀಗಾಗಿ ತಮಗೆ ಸಹಾಯ ಮಾಡಿ ಅಂತ ಉಡುಪಿಯ ಮಂಗಳಮುಖಿಯೊಬ್ಬರು ನಟ ಕಿಚ್ಚ ಸುದೀಪ್ ಅವರಿಗೆ ಸಂದೇಶ ಕಳುಹಿಸಿದ್ದರು. ಮಂಗಳಮುಖಿಯ ಕಷ್ಟಕ್ಕೆ ಸ್ಪಂದಿಸಿದ ಅವರು, ಕಿಚ್ಚ ಸುದೀಪಾ ಚಾರಿಟೇಬಲ್ ಸೊಸೈಟಿ ಮೂಲಕ ದಿನಸಿ ಕಿಟ್ ಕಳುಹಿಸಿಕೊಟ್ಟಿದ್ದಾರೆ.
ಉಡುಪಿಯ ಬೈಲೂರಿನಲ್ಲಿ ವಾಸವಿರುವ ಮಂಗಳಮುಖಿ ಸಾನಿಯಾ ಅವರು, ಸಹಾಯ ಮಾಡುವಂತೆ ಇನ್ಸ್ಟಾಗ್ರಾಂನಲ್ಲಿ ನಟ ಸುದೀಪ್ ಅವರಿಗೆ ಸಂದೇಶ ಕಳುಹಿಸಿದ್ದರಂತೆ. ಸಾನಿಯಾ ಅವರ ಸಂದೇಶ ನೋಡಿದ ಸುದೀಪ್, ಮಾಹಿತಿ ಕಳುಹಿಸಲು ಹೇಳಿದ್ದಾರೆ. ಬಳಿಕ ಕಿಚ್ಚ ಸುದೀಪಾ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಕಿಟ್ಟಿ ಅಣ್ಣ ಅಂತ ನಿಮಗೆ ಕಾಲ್ ಮಾಡ್ತಾರೆ ಎಂದು ರಿಪ್ಲೈ ಮಾಡಿದ್ದರು. ಬಳಿಕ ಸಾನಿಯಾ ಅವರ ವಿಳಾಸ ಪಡೆದು, ಟ್ರಸ್ಟ್‌ನ ಉಡುಪಿ ದಕ್ಷಿಣ ಕನ್ನಡ ಉಸ್ತುವಾರಿ ಆರ್ಯ ದೀಪ್ನಾ ಕರ್ಕೇರಾ ಅವರ ಮೂಲಕ ದಿನಸಿ ಸಾಮಗ್ರಿಗಳನ್ನು ಒದಗಿಸಿದ್ದಾರೆ.