ಉಡುಪಿ: ಜಿಲ್ಲೆಯಲ್ಲಿ ಸುರಿದ ಮಹಾಮಳೆ ನೆರೆಯನ್ನು ಸೃಷ್ಟಿಮಾಡಿತ್ತು. ಜಿಲ್ಲೆಯಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ತಂಡ ಉಡುಪಿ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.
ಉಡುಪಿಯಲ್ಲಿ ಇನ್ನೆರಡು ದಿನ ವರುಣ ಕಂಟಕ... ಜಿಲ್ಲೆಯಲ್ಲಿ ಬೀಡು ಬಿಟ್ಟ ರಾಜ್ಯ ವಿಪತ್ತು ನಿರ್ವಹಣಾ ತಂಡ
ಉಡುಪಿ ಜಿಲ್ಲೆಯಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ತಂಡ ಉಡುಪಿ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.
ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಎಸ್.ಡಿ.ಆರ್ ಎಫ್ ಸಿಬ್ಬಂದಿ ಬೋಟ್ ಮತ್ತು ಜನರನ್ನು ರಕ್ಷಣೆ ಮಾಡುವಂತಹ ಲೈಫ್ ಜಾಕೆಟ್ ಮತ್ತಿತರ ಸಾಮಗ್ರಿಗಳನ್ನು ಸಿದ್ದ ಮಾಡಿಟ್ಟುಕೊಂಡಿದ್ದಾರೆ. ಯಾವುದೇ ಕ್ಷಣಗಳಲ್ಲಿ ಅನಾಹುತ ಆದರೆ ಆ ಸ್ಥಳಕ್ಕೆ ತೆರಳಿ ಜನರನ್ನು ರಕ್ಷಣೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಭಾನುವಾರ ಜಿಲ್ಲೆಯಾದ್ಯಂತ ಹೆಚ್.ಡಿ.ಆರ್.ಎಸ್ ತಂಡದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ನೂರಾರು ಜನರ ಜೀವನ ರಕ್ಷಣೆ ಮಾಡಿದ್ದಾರೆ.
ಅಗ್ನಿಶಾಮಕ ದಳ ತಂಡ, ಸ್ಥಳೀಯರು, ಹಿರಿಯ ನಾಗರಿಕರನ್ನು ಗರ್ಭಿಣಿ ಮಹಿಳೆಯರನ್ನು ಮಕ್ಕಳನ್ನು ವೃದ್ಧರನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಎರಡು ದಿನ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ತಂಡ ಉಡುಪಿಯಲ್ಲಿ ಮೊಕ್ಕಾಮ್ ಹೂಡಲಿದೆ.