ಉಡುಪಿ: ಕೊರೋನಾ ಆತಂಕ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೂ ತಟ್ಟಿದ್ದು, ನ್ಯಾಯಾಧೀಶರಿಗೂ ಕೋವಿಡ್-19 ದೃಢಪಟ್ಟಿದೆ.
ಜಡ್ಜ್ಗೂ ಕೊರೊನಾ: ನ್ಯಾಯಾಲಯವೇ ಸೀಲ್ಡೌನ್! - ಉಡುಪಿ ಕೊರೊನಾ ಸುದ್ದಿ
ಉಡುಪಿ ನಗರದಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಿಗೆ ಕೊರೊನಾ ದೃಢಪಟ್ಟಿದ್ದು, ನ್ಯಾಯಾಲಯ ಆವರಣ ಎರಡು ದಿನಗಳ ಕಾಲ ಸೀಲ್ಡೌನ್ ಆಗಲಿದೆ.
ಉಡುಪಿ ಕೋರ್ಟ್
ಈ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆವರಣ ಎರಡು ದಿನಗಳ ಕಾಲ ಸೀಲ್ಡೌನ್ ಆಗಲಿದೆ.
ಸಂಪೂರ್ಣ ನ್ಯಾಯಾಲಯ ಸ್ಯಾನಿಟೈಸ್ ಮಾಡಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಎರಡು ದಿನಗಳ ಕಾಲ ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ತಡೆಯಾಗಲಿದೆ.