ಉಡುಪಿ:ನಗರದಲ್ಲಿ ಮೊಬೈಲ್ ಅಂಗಡಿ ದರೋಡೆ ನಡೆಸಿದ್ದ ಮೂವರು ಅಂತರ್ ರಾಜ್ಯ ಚೋರರನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಡುಪಿಯಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನ: ಮೊಬೈಲ್-ನಗದು ವಶ - ಉಡುಪಿಯಲ್ಲಿ ಕಳ್ಳರ ಬಂಧನ
ನಗರದ ಪ್ಲೇಝೋನ್ ಮೊಬೈಲ್ ಅಂಗಡಿಯಲ್ಲಿ 8.34 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ಕಳವು ಮಾಡಿದ್ದ ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
![ಉಡುಪಿಯಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನ: ಮೊಬೈಲ್-ನಗದು ವಶ thieves arrest](https://etvbharatimages.akamaized.net/etvbharat/prod-images/768-512-5257968-thumbnail-3x2-chai.jpg)
ಅಂತರರಾಜ್ಯ ಕಳ್ಳರ ಬಂಧನ
ರಜಾಕ್ ಅಸ್ಲಾಂ ಮುಜಾವರ್(20), ರಾಜಾಸಾಬ್ ನಾಯಕ್(25), ದೀಪಕ್ ಪ್ರಸಾದ್(25) ಬಂಧಿತ ಆರೋಪಿಗಳು.
ಖದೀಮರು ನಗರದ ಪ್ಲೇಝೋನ್ ಮೊಬೈಲ್ ಅಂಗಡಿಯಲ್ಲಿ 8.34 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ಕಳವು ಮಾಡಿದ್ದರು. ಬಂಧಿತ ಆರೋಪಿಗಳಿಂದ 3 ಲಕ್ಷ ಮೌಲ್ಯದ 16 ಮೊಬೈಲ್ ಹಾಗೂ 22 ಸಾವಿರ ನಗದು, ಕಳವು ಮಾಡಲು ಉಪಯೋಗಿಸುವ ಕಬ್ಬಿಣದ ಸ್ಕ್ರೂ ಡ್ರೈವರ್, ಕಟ್ಟಿಂಗ್ ಪ್ಲೇಯರ್, ಬ್ಯಾಗ್, ಮಾಸ್ಕ್, ಕ್ಯಾಪ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಡಿಸಿಐಬಿ ಹಾಗೂ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಸೆರೆ ಹಿಡಿದಿದ್ದಾರೆ.