ಕರ್ನಾಟಕ

karnataka

ETV Bharat / state

ಕುಂದಾಪುರ ತಾಲೂಕಿನ ಗುಳ್ವಾಡಿಯಲ್ಲಿ ಅಪರೂಪದ ಶಾಸನ ಪತ್ತೆ - undefined

ಪ್ರದೀಪ ಕುಮಾರ್ ಬಸ್ರೂರು ಎಂಬುವವರು ಸತತವಾಗಿ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಪುರಾತನ ಶಿಲಾ ಶಾಸನಗಳನ್ನು ಪತ್ತೆ ಹಚ್ಚಿದ್ದು, ತಾಲೂಕಿನ ಗುಲ್ವಾಡಿ ಸೌಕೂರು ಕಂಬಳದ ಬಳಿ ಒಂದು ಹಾಗೂ ಶಂಕರನಾರಾಯಣ ಸಮೀಪ ಒಂದು ಶಾಸನ ಪತ್ತೆಯಾಗಿದೆ.

Udupi

By

Published : Jun 28, 2019, 11:04 AM IST

Updated : Jun 28, 2019, 11:13 AM IST

ಕುಂದಾಪುರ:ತಾಲೂಕಿನ ಗುಲ್ವಾಡಿ ಸೌಕೂರು ಕಂಬಳದ ಗದ್ದೆಯ ಬಳಿ ಅಪರೂಪದ ಶಾಸನ ಪತ್ತೆಯಾಗಿದೆ.

ಅಪ್ಪಣ್ಣ ಶೆಟ್ಟಿ ಎನ್ನುವವರ ಮನೆಯ ಬಳಿಯಿರುವ ಬರದ್ಕಲ್ ಗದ್ದೆಯಲ್ಲಿ ಶಾಸನ ಪತ್ತೆಯಾಗಿದ್ದು, ಇದರ ಮೇಲೆ ಶಿವಲಿಂಗ, ಸೂರ್ಯ, ಚಂದ್ರ, ಆನೆ, ಲಿಂಗದ ಮೇಲೆ ಪುಷ್ಪವನ್ನು ಸಮರ್ಪಿಸುವ ಸನ್ನಿವೇಶ ಕಂಡು ಬಂದಿದೆ. ಶಾಸನದ ಮೇಲೆ ಅಕ್ಷರಗಳು ಕಂಡು ಬಂದಿದ್ದು, ಅಸ್ಪಷ್ಟವಾಗಿವೆ. ಇದನ್ನು ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹೆಚ್ಚಿದ್ದು, ಸಂಪೂರ್ಣ ಮಾಹಿತಿ ಅಧ್ಯಯನ ಬಳಿಕವಷ್ಟೆ ಲಭ್ಯವಾಗಲಿದೆ.

ಶಿಲಾ ಶಾನಗಳನ್ನು ಪತ್ತೆ ಹಚ್ಚಿದ ಪ್ರದೀಪ ಕುಮಾರ್ ಬಸ್ರೂರು

ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ :
ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ಸಮೀಪ ಮತ್ತೊಂದು ಶಾಸನ ಪತ್ತೆಯಾಗಿದ್ದು, ಭೋಗರಮಕ್ಕಿ ನವೀನ್ ಕುಲಾಲ್ ಎಂಬುವವರ ಅಡಿಕೆ ತೋಟದಲ್ಲಿ ವಿಜಯನಗರ ಕಾಲದ ಶಾಸನ ಸಿಕ್ಕಿದೆ.

ಶಂಕರನಾರಾಯಣ ಸಮೀಪ ಪತ್ತೆಯಾಗಿರುವ ವಿಜಯನಗರ ಕಾಲದ ಶಿಲಾ ಶಾಸನ

ಈ ಶಿಲಾ ಶಾಸನದ ಬಗ್ಗೆ ಪುರಾತತ್ವ ತಜ್ಞರಾದ ಪ್ರೋ.ಮುರುಗೇಶಿ ಅವರು ಮಾಹಿತಿ ನೀಡಿದ್ದು, ಶಾಸನಗಳಲ್ಲಿ ಸೂರ್ಯ, ಚಂದ್ರ, ದೀಪ, ನಂದಿ, ಶಿವ ಲಿಂಗ, ಆಂಜನೇಯನ ಕೆತ್ತನೆ ಇರುವುದು ವಿಶೇಷವಾಗಿದೆ. ಶಾಸನ ಪತ್ತೆ ಮಾಡಿದ ಪ್ರದೀಪ್​ ತಂಡಕ್ಕೆ ಪುರಾತತ್ವ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Jun 28, 2019, 11:13 AM IST

For All Latest Updates

TAGGED:

ABOUT THE AUTHOR

...view details