ಉಡುಪಿ: ಪಾಪಿ ತಾಯಿಯೊಬ್ಬಳು ಕಸದ ಬುಟ್ಟಿಗೆ ಮಗುವನ್ನು ಎಸೆದು ಹೋಗಿದ್ದು ಉಡುಪಿ ನಾಗರಿಕ ಸಮಿತಿ ಮಗುವನ್ನು ರಕ್ಷಣೆ ಮಾಡಿದೆ.
ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ: ನಾಗರಿಕ ಸಮಿತಿಯಿಂದ ರಕ್ಷಣೆ - ನಾಗರಿಕ ಸಮಿತಿ
ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿಯ ಕಸದ ಬುಟ್ಟಿಯಲ್ಲಿ ಪಾಪಿ ತಾಯಿಯೊಬ್ಬಳು ಮಗುವನ್ನು ಎಸೆದ ಹೋಗಿದ್ದು, ಉಡುಪಿ ನಾಗರಿಕ ಸಮಿತಿ ಮಗುವನ್ನು ರಕ್ಷಣೆ ಮಾಡಿದೆ.
ನಾಗರಿಕ ಸಮಿತಿಯಿಂದ ನವಜಾತ ಶಿಶು ರಕ್ಷಣೆ
ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿಯ ಕಸದ ಬುಟ್ಟಿಯಲ್ಲಿ ಮಗುವನ್ನು ಎಸೆದು ಹೋಗಿದ್ದಾರೆ. ಹೆಣ್ಣು ನವಜಾತ ಶಿಶು ಇದಾಗಿದ್ದು, ಕಂದಮ್ಮ ಅಳುತ್ತಿದ್ದ ಶಬ್ದ ಕೇಳಿದ ನಗರಸಭೆಯ ಪೌರ ಕಾರ್ಮಿಕರು ಹಾಗೂ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಅವರು, ಉಡುಪಿ ಸರಕಾರಿ ಮಹಿಳಾ ಹೆರಿಗೆ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ.
ಸದ್ಯ ಮಗು ಆರೋಗ್ಯವಾಗಿದ್ದು, ಉಡುಪಿ ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.