ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬರುವುದಾದರೆ ಸ್ವಾಗತಿಸುತ್ತೇವೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಜೆಡಿಎಸ್ಗೆ ಪ್ರಮೋದ್ ಮಧ್ವರಾಜ್ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿ, ಪ್ರಮೋದ್ ಬಿಜೆಪಿಗೆ ಅರ್ಜಿ ಹಾಕಿದ್ರೆ ಪಕ್ಷ ಪರಿಗಣಿಸಬಹುದು. ಈ ಬಗ್ಗೆ ಪಕ್ಷದ ರಾಜ್ಯ, ಕೇಂದ್ರ, ಜಿಲ್ಲಾ ನಾಯಕರು ಸೇರಿ ತೀರ್ಮಾನ ಮಾಡ್ತಾರೆ. ಸದ್ಯ ಪ್ರಮೋದ್ರಿಂದ ಯಾವುದೇ ಅರ್ಜಿ ಬಂದಿಲ್ಲ. ಈ ಹಿಂದೆ ಒಮ್ಮೆ ಅರ್ಜಿ ಹಾಕಿದ್ದರು. ಆಗ ಬಿಜೆಪಿ ಗೇಟ್ ಹಾಕಿದೆ ಅಂತ ವಾಪಾಸ್ ಹೋಗಿದ್ರು. ಆದರೆ ಈಗ ಅರ್ಜಿ ಹಾಕಿದ್ರೆ ಗೇಟ್ ಓಪನ್ ಇದೆ. ಬಿಜೆಪಿಗೆ ಬರಬಹುದು ತೊಂದ್ರೆ ಇಲ್ಲ ಎಂದಿದ್ದಾರೆ.