ಉಡುಪಿ:ನಾನೇನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆನೂ ನೀಡಿಲ್ಲ. ಪಕ್ಷವನ್ನು ಉಚ್ಛಾಟನೆಯನ್ನು ಮಾಡಿಲ್ಲ. ತಾಂತ್ರಿಕವಾಗಿ ನಾನು ಪಕ್ಷದಲ್ಲಿದ್ದೇನೆ. ಅದನ್ನು ಪಕ್ಷದ ಮುಖಂಡರು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಜೇಶ್ವರ ವಿಧಾನಸಭಾ ಉಪಚುನಾವಣೆ ವಿಚಾರದಲ್ಲಿ ಕೆಪಿಸಿಸಿ,ಎಐಸಿಸಿಯಿಂದ ನನಗೆ ಬುಲಾವ್ ಬಂದಿದ್ದು, ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಕರೆ ಮಾಡಿದ್ದಾರೆ. ಉಪ್ಪಳದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೂ ಆಹ್ವಾನ ಬಂದಿದೆ. ಕಾಂಗ್ರೆಸ್ ಮುಖಂಡ ಕೆ.ಸಿ ವೇಣುಗೋಪಾಲ್ ಭಾಗಿಯಾಗುವ ಸಭೆಯಲ್ಲಿ ನಾನು ಭಾಗಿಯಾಗಲಿದ್ದೇನೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದೆ. ಆದರೆ ಜೆಡಿಎಸ್ -ಕಾಂಗ್ರೆಸ್ ಮೈತ್ರಿಯಾದಾಗ ಈ ಕ್ಷೇತ್ರ ಜೆಡಿಎಸ್ ಪಾಲಾದಾಗ ನಾನು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ್ದೆ. ಜೆಡಿಎಸ್ ಪಕ್ಷದಿಂದ ಬಿ ಫಾರ್ಮ್ ಪಡೆದ ಮೇಲೂ ನಾನು ಕಾಂಗ್ರೆಸ್ನಲ್ಲಿದ್ದೆ. ಅದರ ತಾಂತ್ರಿಕ ಸದಸ್ಯ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ ಎಂದರು.
ಇನ್ನು ನಾನು ಶಾಲಿನಲ್ಲೂ ಕೈ ಚಿಹ್ನೆ ಬಿಟ್ಟಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಡಲೇ ಇಲ್ಲ. ಪಕ್ಷವೂ ನನ್ನನ್ನು ಉಚ್ಛಾಟನೆ ಮಾಡಿಲ್ಲ. ತಾಂತ್ರಿಕವಾಗಿ ಕಾಂಗ್ರೆಸ್ನಲ್ಲೆ ಇದ್ದೇನೆ. ಆದರೆ, ಅದನ್ನು ಪಕ್ಷದ ಮುಂಖಡರು ಅಧಿಕೃತ ಮಾಡಬೇಕಿದೆ. ಈಗ ಪಕ್ಷವೇ ನನ್ನನ್ನು ಮಂಜೇಶ್ವರಕ್ಕೆ ಕರೆದದ್ದರಿಂದ ಎಲ್ಲ ತಾಂತ್ರಿಕ ಸಮಸ್ಯೆಗಳು ಪರಿಹಾರ ಆಗಿದೆ ಎಂದು ಭಾವಿಸುತ್ತೇನೆ ಎಂದರು.
ತಾಂತ್ರಿಕತೆಯ ಸಮಸ್ಯೆ ಬಿಟ್ಟರೇ ದೈಹಿಕವಾಗಿ, ಮಾನಸಿಕವಾಗಿ ನಾನು ಕಾಂಗ್ರೆಸ್ನಲ್ಲೆ ಇದ್ದೇನೆ. ಈ ಸಮಸ್ಯೆಯನ್ನು ಪಕ್ಷದ ವರಿಷ್ಠರು ಪರಿಹಾರ ಮಾಡಿದ್ದಾರೆ. ಮುಂದೆ ಅಧಿಕೃತವಾಗಿ ಪರಿಹಾರವಾಗುತ್ತದೆ. ನಾನು ದಿನೇಶ್ ಗುಂಡೂರಾವ್ಗೆ ಪತ್ರ ಬರೆದಿದ್ದೇನೆ. ಕೆರೆ ಮಾಡಿ ಪತ್ರದ ಬಗ್ಗೆ ತೀರ್ಮಾನ ಮಾಡುವ ಭರವಸೆ ನೀಡಿದ್ದಾರೆ. ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶಕ್ಕಾಗಿ ಕೋರಿ ಪತ್ರ ಕೊಟ್ಟದ್ದೆ ಹೊರತು ಪಕ್ಷಕ್ಕೆ ಸೇರ್ಪಡೆ ಮಾಡಿ ಎಂದು ಪತ್ರ ಕೊಟ್ಟದ್ದಲ್ಲ. ಜೆಡಿಎಸ್ಗೆ ರಾಜೀನಾಮೆ ಪತ್ರ ಕೊಟ್ಟಿದ್ದೇನೆ. ಅವರೇನೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.