ಕರ್ನಾಟಕ

karnataka

ETV Bharat / state

ಉಡುಪಿ: ನಿರಂತರ ಮಳೆಗೆ ಕುಸಿದ ಮನೆ, ಕುಟುಂಬ ಪಾರು - udupi heavy rain house collapsed

ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮನೆಯೊಂದು ಕುಸಿದು ಬಿದ್ದಿದೆ. ಮತ್ತೊಂದೆಡೆ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದೆ.

house collapsed due to rain
ನಿರಂತರ ಮಳೆಯಿಂದ ಕುಸಿದ ಮನೆ ಪ್ರಾಣಾಪಾಯದಿಂದ ಪಾರಾದ ಕುಟುಂಬ

By

Published : Jul 11, 2022, 1:06 PM IST

ಉಡುಪಿ:ಜಿಲ್ಲೆಯಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ನಂದ್ರೊಳ್ಳಿ ಕ್ಷೇತ್ರಪಾಲ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಇಂದು ಬೆಳಗಿನ ಜಾವ ಮನೆಯವರು ನಿದ್ರಿಸುತ್ತಿದ್ದ ಸಮಯದಲ್ಲಿ ಜೋರಾಗಿ ಮಳೆಯಾಗಿದ್ದು ಒಳಮನೆಯ ಗೊಡೆ ಬಿದ್ದಿದೆ. ತಕ್ಷಣ ಮನೆಯವರು ಎದ್ದು ಹೊರಬಂದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಯ ಕುರಿತು ಪಂಚಾಯತ್ ಸದಸ್ಯ ನಾರಾಯಣ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರಿಗೆ ಮಾಹಿತಿ ರವಾನಿಸಿದ್ದು, ಶಾಸಕರು ಪರಿಹಾರ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಶಾಲೆ ಮೇಲ್ಛಾವಣಿ ಕುಸಿತ:ಬೈಂದೂರು ತಾಲೂಕು ಉಪ್ಪುಂದ ಗ್ರಾಮದಲ್ಲಿ ಮಳೆಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದಿದೆ. ಮಳೆ ಹಿನ್ನೆಲೆಯಲ್ಲಿ ಶಾಲೆಗೆ ರಜೆ ನೀಡಲಾಗಿದ್ದು ಅನಾಹುತ ತಪ್ಪಿದೆ. ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಇಂದೂ ಕೂಡ ಶಾಲೆ, ಹೈಸ್ಕೂಲ್‌ಗಳಿಗೆ ರಜೆ ನೀಡಲಾಗಿದೆ. ಹವಾಮಾನ ಇಲಾಖೆ ಜಿಲ್ಲೆಗೆ ರೆಡ್​ ಅಲರ್ಟ್ ನೀಡಿದೆ.

ಇದನ್ನೂ ಓದಿ:ಮುಂದಿನ 48 ಗಂಟೆ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್: ಹವಾಮಾನ ಇಲಾಖೆ

ABOUT THE AUTHOR

...view details