ಕರ್ನಾಟಕ

karnataka

ETV Bharat / state

ಲಾಕ್ ಡೌನ್ ಎಫೆಕ್ಟ್: ಗ್ರಾಹಕರಿಲ್ಲದೆ ಹೋಟೆಲ್ ಉದ್ಯಮಿಗಳಿಗೆ ಸಂಕಷ್ಟ - ಹೋಟಲ್​ ಪಾರ್ಸಲ್ ಸೇವೆ

ಲಾಕ್​ಡೌನ್ ಹಿನ್ನೆಲೆ ಹೋಟೆಲ್​ಗಳಿಗೆ ಪಾರ್ಸಲ್ ಸೇವೆ ನೀಡಲು ಮಾತ್ರ ಅನುಮತಿ ಕೊಡಲಾಗಿದೆ. ಇದರಿಂದ ಹೋಟೆಲ್​​ಗಳಲ್ಲಿ ಮಾಲೀಕರು, ಒಂದಿಬ್ಬರು ಸರ್ವರ್​ಗಳು ಮಾತ್ರ ಕಾಣುತ್ತಾರೆ. ಆಗೀಗ ಒಬ್ಬೊಬ್ಬರು ಗ್ರಾಹಕರು ಬಂದು ಪಾರ್ಸಲ್ ತೆಗೆದುಕೊಂಡು ಹೋಗುವ ಪರಿಣಾಮ, ಬಾಗಿಲು ತೆರೆದರೂ ಪ್ರಯೋಜನವಿಲ್ಲ ಎಂಬಂತಾಗಿದೆ.

ಹೋಟೆಲ್
ಹೋಟೆಲ್

By

Published : May 28, 2020, 7:20 PM IST

ಶಿರಸಿ:ಬೇರೆಯವರ ಹೊಟ್ಟೆ ತುಂಬಿಸಿ ತಮ್ಮ ಜೀವನ ಕಟ್ಟಿಕೊಳ್ಳುತ್ತಿದ್ದ ಹೋಟೆಲ್ ಉದ್ಯಮಿಗಳು ಲಾಕ್​ಡೌನ್ ಹೊಡೆತಕ್ಕೆ ನಲುಗಿದ್ದಾರೆ. ಅರ್ಧ ಬಾಗಿಲು ತೆರೆಯುತ್ತಿರುವ ಸಣ್ಣ ಹೋಟೆಲ್​ಗಳಿಗೆ ಶಾಶ್ವತವಾಗಿ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಲಾಕ್​ಡೌನ್ ಹಿನ್ನೆಲೆ ಹೋಟೆಲ್​ಗಳಿಗೆ ಪಾರ್ಸಲ್ ಸೇವೆ ನೀಡಲು ಮಾತ್ರ ಅನುಮತಿ ಕೊಡಲಾಗಿದೆ. ಇದರಿಂದ ಹೋಟೆಲ್​​ಗಳಲ್ಲಿ ಮಾಲೀಕರು, ಒಂದಿಬ್ಬರು ಸರ್ವರ್​ಗಳು ಮಾತ್ರ ಕಾಣುತ್ತಾರೆ. ಆಗೀಗ ಒಬ್ಬೊಬ್ಬರು ಗ್ರಾಹಕರು ಬಂದು ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ. ಗ್ರಾಹಕರಿಲ್ಲದೆ ಬಾಗಿಲು ತೆರೆದರೂ ಪ್ರಯೋಜನವಿಲ್ಲ ಎಂಬಂತಾಗಿದೆ.

ಹೋಟೆಲ್ ಮಾಲೀಕರ ಸಂಕಷ್ಟ

ಶಿರಸಿ ನಗರದಲ್ಲಿಯೇ 13 ದೊಡ್ಡ ಹೋಟೆಲ್​ಗಳಿವೆ. ಸಣ್ಣ ಹೋಟೆಲ್​​ಗಳು, ದರ್ಶಿನಿಗಳು ಸೇರಿದರೆ ಸುಮಾರು 70 ದಾಟುತ್ತವೆ. ಮಾಲೀಕರು, ಸರ್ವರ್​ಗಳು, ಕ್ಲೀನರ್​ಗಳು ಸೇರಿ 300ಕ್ಕೂ ಹೆಚ್ಚು ಜನರು ಇದೇ ಉದ್ಯಮವನ್ನು ನಂಬಿಕೊಂಡಿದ್ದಾರೆ. ಆದರೆ ಲಾಕ್​ಡೌನ್ ನಂತರ ಶೇ.5 ರಷ್ಟು ಮಾತ್ರ‌ ವ್ಯವಹಾರ ನಡೆಯುತ್ತಿದೆ. ಅಲ್ಲದೇ ಅರ್ಧದಷ್ಟು ಕೆಲಸಗಾರರು ಹಾಜರಾಗುತ್ತಿದ್ದರೂ ಅವರಿಗೆ ಸಂಬಳ ನೀಡುವುದೇ ಕಷ್ಟ ಎನ್ನುತ್ತಾರೆ ಹೋಟೆಲ್ ಮಾಲೀಕರು.

ನೂರಾರು ಜನರ ಹೊಟ್ಟೆ ತುಂಬಿಸಿ ತಮ್ಮ ಮನೆ, ಬದುಕು ಕಟ್ಟಿಕೊಳ್ಳುತ್ತಿದ್ದವರ ಜೀವನ ಈಗ ಮೂರಾಬಟ್ಟೆಯಾಗಿದೆ. ದಿನಸಿ ಸಾಮಗ್ರಿಗಳ ದರ ದುಪ್ಪಟ್ಟಾಗಿದೆ. ಶೇ. 80 ರಷ್ಟು ವ್ಯಾಪಾರ ಕಡಿಮೆಯಾಗಿದೆ. ಇದರಿಂದ ಮಾಲೀಕರು ಲಾಭದ ನಿರೀಕ್ಷೆ ಇಲ್ಲದೇ ಹೋಟೆಲ್​ ಉದ್ಯಮ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.‌

ABOUT THE AUTHOR

...view details