ಉಡುಪಿ: ಹಿಜಾಬ್ ವಿವಾದದಿಂದಾಗಿ ರಾಜ್ಯ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಉಡುಪಿಯಲ್ಲಿ ಈಗ ಮತ್ತೆ ಲವ್ ಜಿಹಾದ್ ಸದ್ದು ಕೇಳಿ ಬರುತ್ತಿದೆ. ಕುಂದಾಪುರ ಸಮೀಪದ ಹುಡುಗಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಕಾರಣ ಹುಡುಕುವಾಗ ಲವ್, ಸೆಕ್ಸ್ ಜಿಹಾದ್ ಬೆಳಕಿಗೆ ಬಂದಿದೆ. ಇದೇ ವಿಚಾರವಾಗಿ ಕುಂದಾಪುರ ಪರಿಸರದ ಹಿಂದೂ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ.
ಉಡುಪಿ ಯುವತಿ ಆತ್ಮಹತ್ಯೆ ಪ್ರಕರಣ: ಲವ್, ಸೆಕ್ಸ್ ಜಿಹಾದ್ ಎಂದ ಹಿಂದೂ ಮಖಂಡರು ಕಳೆದ ನಾಲ್ಕು ವರ್ಷಗಳ ಹಿಂದೆ ಮೂಡುಗೋಪಾಡಿ ನಿವಾಸಿ ಅಜೀಜ್ (32) ಎಂಬಾತನ ಜವಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಯ ಜೊತೆ ಅಜೀಜ್ ಸ್ನೇಹ ಸಂಪಾದಿಸಿದ್ದ. ಚಾಲಾಕಿಯಾದ್ದ ಅಜೀಜ್, ಯುವತಿಯ ಸ್ನೇಹ ಸಲುಗೆಯನ್ನೇ ಪ್ರೀತಿಯನ್ನಾಗಿಸಿ ಪುಸಲಾಯಿಸಿ, ನಿರಂತರವಾಗಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಿಸಿಕೊಳ್ಳುತ್ತಿದ್ದನಂತೆ.
ಕೋಟೇಶ್ವರದಲ್ಲಿ ತನ್ನ ಫ್ಲಾಟ್ಗೆ ಯುವತಿ ಕರೆಯಿಸಿಕೊಂಡು ಮೋಜು ಮಾಡುತ್ತಿದ್ದನಂತೆ. ಅವಳ ಖಾಸಗಿ ಫೋಟೋಗಳನ್ನು ಸೆರೆ ಹಿಡಿದು ಮತ್ತೆ ಮತ್ತೆ ಆ ಹುಡಗಿಯನ್ನು ಬೆದರಿಸಿ ಆತನ ಬಳಿ ಕರೆಸಿಕೊಂಡು ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ಇದೆಲ್ಲದರ ಪರಿಣಾಮ ಕಳೆದ ಕೆಲವು ದಿನಗಳ ಹಿಂದೆ ಯುವತಿ ತನ್ನನ್ನು ಮದುವೆಯಾಗುವಂತೆ ಅಜೀಜ್ಗೆ ಕೇಳಿದ್ದಾಳೆ ಎನ್ನಲಾಗಿದೆ. ಈ ವೇಳೆ ಅಜೀಜ್ ಮತಾಂತರವಾಗುವಂತೆ ಒತ್ತಾಯ ಮಾಡಿದ್ದನಂತೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಹುಡುಗಿಯ ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದ್ದು, ಇದರಿಂದ ಹೆದರಿದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಯುವತಿ ಬರೆದ ಕಾವ್ಯ ರೂಪದ ಡೆತ್ ನೋಟ್ ಕೂಡಾ ಸಿಕ್ಕಿದೆ.
ಆರೋಪಿಗೆ ಈ ಮೊದಲೇ ತನ್ನದೇ ಸಮುದಾಯದ ಯುವತಿ ಜೊತೆ ವಿವಾಹವಾಗಿದೆ. ಅಲ್ಲದೇ ಯುವತಿಯ ಧರ್ಮ ಪರಿವರ್ತನೆಗೆ ಆ ಪತ್ನಿಯೂ ಕುಮ್ಮಕ್ಕು ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಇತ್ತ ಮನೆಯ ಮಗಳನ್ನು ಕಳೆದುಕೊಂಡ ಪೋಷಕರ ಮನದಲ್ಲಿ ದುಃಖ ಮುಡುಗಟ್ಟಿದೆ. ಮನೆಯವರ ನೈತಿಕ ಬೆಂಬಲಕ್ಕೆ ನಿಂತ ಹಿಂದೂ ಸಂಘಟನೆ ಮುಖಂಡರು ಆರೋಪಿಯನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ: 'ಡೋಲಿ'ಯೇ ಆ್ಯಂಬುಲೆನ್ಸ್: ಹಾವು ಕಚ್ಚಿದ ವ್ಯಕ್ತಿಯನ್ನು 6 ಕಿ.ಮೀ. ಹೊತ್ತೊಯ್ದ ಯುವಕರು