ಕರ್ನಾಟಕ

karnataka

ETV Bharat / state

ಆಗುಂಬೆ ಘಾಟಿಯಲ್ಲಿ ಘನವಾಹನ ಸಂಚಾರ ನಿಷೇಧ : ಮಾರ್ಗ ಬದಲಾಯಿಸಿ ಡಿಸಿ ಆದೇಶ - ಆಗುಂಬೆ ಘಾಟಿಯಲ್ಲಿ ಘನವಾಹನ ಸಂಚಾರ ನಿಷೇಧ

ಆಗುಂಬೆ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಭಾರೀ ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿದು, ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ ಹಾಗೂ ರಾಜ್ಯ ಮೋಟಾರು ವಾಹನಗಳ ನಿಯಮ ಪ್ರಕಾರ ಆಗುಂಬೆ ಘಾಟಿಯಲ್ಲಿ ಅಕ್ಟೋಬರ್ 15ರವರೆಗೆ 12ಟನ್​​ಗಿಂತ ಅಧಿಕ ಭಾರದ ವಾಹನಗಳ ಸಂಚಾರ ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ..

agumbe-ghat
ಆಗುಂಬೆ ಘಾಟಿ

By

Published : Jun 26, 2021, 5:12 PM IST

ಉಡುಪಿ :ಇಂದಿನಿಂದ ಅಕ್ಟೋಬರ್​​ 15ರವರಗೆ ಆಗುಂಬೆ ಘಾಟಿಯಲ್ಲಿ ಘನ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್​​ ಅವರು ಆದೇಶ ಹೊರಡಿಸಿದ್ದಾರೆ. ಆಗುಂಬೆ ಘಾಟಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 169(ಎ)ರ ತೀರ್ಥಹಳ್ಳಿ-ಉಡುಪಿ ರಸ್ತೆ ಕಿರಿದಾಗಿದೆ.

ಇದರಿಂದ ಮಳೆಗಾಲದಲ್ಲಿ ಭಾರೀ ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿದು, ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ ಹಾಗೂ ರಾಜ್ಯ ಮೋಟಾರು ವಾಹನಗಳ ನಿಯಮ ಪ್ರಕಾರ ಆಗುಂಬೆ ಘಾಟಿಯಲ್ಲಿ ಅಕ್ಟೋಬರ್ 15ರವರೆಗೆ 12 ಟನ್​​ಗಿಂತ ಅಧಿಕ ಭಾರದ ವಾಹನಗಳ ಸಂಚಾರ ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ.

ಮಾರ್ಗ ಬದಲಾವಣೆ

ಉಡುಪಿ - ಸಿದ್ದಾಪುರ - ಹೊಸಂಗಡಿ - ಬಾಳೆಬರೇ ಘಾಟ್ ಹುಲಿಕಲ್- ಮಾಸ್ತಿಕಟ್ಟೆ- ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹಾಗೂ ಮಂಗಳೂರು-ಕಾರ್ಕಳ -ಹೆಬ್ರಿ-ಸಿದ್ದಾಪುರ-ಹೊಸಂಗಡಿ-ಬಾಳೆಬರೇ ಘಾಟ್-ಹುಲಿಕಲ್-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಮಾರ್ಗವಾಗಿ ಶಿವಮೊಗ್ಗ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ABOUT THE AUTHOR

...view details