ಕರ್ನಾಟಕ

karnataka

ETV Bharat / state

ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ.. ಛಾವಣಿ ಕುಸಿದು ಇಬ್ಬರಿಗೆ ಗಾಯ - Udupi rain news

ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಳತ್ತೂರು ಹಾಗೂ ಪಾದೂರು ಗ್ರಾಮದಲ್ಲಿ ಬೀಸಿದ ಸುಂಟರಗಾಳಿಗೆ ಎರಡು ಮನೆಗಳ ಛಾವಣಿ ಕುಸಿದಿವೆ.

heavy rain in udupi district
ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ..ಚಾವಣಿ ಕುಸಿದು ಇಬ್ಬರಿಗೆ ಗಾಯ

By

Published : Aug 16, 2020, 3:49 PM IST

ಉಡುಪಿ: ಜಿಲ್ಲೆಯಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರಾಗಿದ್ದು, ಅಪಾರ ಹಾನಿ ಸಂಭವಿಸಿದೆ.

ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ..ಚಾವಣಿ ಕುಸಿದು ಇಬ್ಬರಿಗೆ ಗಾಯ

ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಕಳತ್ತೂರು ಹಾಗೂ ಪಾದೂರು ಗ್ರಾಮದಲ್ಲಿ ಬೀಸಿದ ಸುಂಟರಗಾಳಿಗೆ ಎರಡು ಮನೆಗಳ ಛಾವಣಿ ಕುಸಿದಿದ್ದು, ಮನೆಯೊಳಗಿದ್ದ ಶಾಮಲಾ ಮಡಿವಾಳ ಹಾಗೂ ಮೂರ್ತಿ ಎಂಬುವರ ತಲೆಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಕಾಪು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ಪ್ರದೇಶದಲ್ಲಿ ರಸ್ತೆ ಬದಿಯಿದ್ದ ಗೂಡಂಗಡಿಯ ಛಾವಣಿ ಹಾರಿಹೋಗಿದ್ದು, ನಷ್ಟ ಉಂಟಾಗಿದೆ.

ABOUT THE AUTHOR

...view details