ಉಡುಪಿ: ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭಾರಿ ಅವಘಡವೊಂದು ಸಂಭವಿಸಿದೆ. ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಯ ಮೇಲ್ಛಾವಣಿಯೇ ಹಾರಿಹೋಗಿರುವ ಘಟನೆ ಜಿಲ್ಲೆಯ ಕುಂದಾಪುರ ನಗರದ ವಿನಾಯಕ ಟಾಕೀಸ್ ಬಳಿ ನಡೆದಿದೆ.
ಕುಂದಾಪುರದಲ್ಲಿ ಭಾರಿ ಅವಘಡ.. LPG ಸ್ಫೋಟಗೊಂಡು ಹಾರಿಹೋಯ್ತು ಮನೆಯ ಮೇಲ್ಛಾವಣಿ - ಕುಂದಾಪುರ
ಅಡುಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯ ಮೇಲ್ಛಾವಣಿ ಜೊತೆಗೆ ಗೋಡೆಗಳು ಬಿರುಕು ಬಿಟ್ಟಿವೆ. ಉಡುಪಿ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಸ್ಫೋಟಗೊಂಡು ಮನೆಗೆ ಹಾನಿ
ಘಟನೆಯಿಂದ ಮನೆ ಮಾಲೀಕ ವಿಸೆಂಟ್ ಡಿಸೋಜಾಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆ ಹಂಚು ಹಾರಿ ಹೋಗಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.
ಸ್ಫೋಟದ ಶಬ್ದ ಕೇಳಿಸಿದ ಕೂಡಲೇ ಸ್ಥಳೀಯರು ವಿಸೆಂಟ್ ಅವರ ಮನೆಗೆ ತೆರಳಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.