ಕರ್ನಾಟಕ

karnataka

ETV Bharat / state

ಸಂಘಟನೆಯಲ್ಲಿ ಬೆಳೆದ ನನಗೂ ಜವಾಬ್ದಾರಿ ಇದೆ: ಸಚಿವ ಎಸ್.ಅಂಗಾರ - ಸಂಘಟನೆಯಲ್ಲಿ ಬೆಳೆದ ನನಗೂ ಜವಾಬ್ದಾರಿಯಿದೆ

ಕ್ಷೇತ್ರದ ಜನತೆ ನನ್ನನ್ನು ಆರು ಅವಧಿಗೆ ಗೆಲ್ಲಿಸಿದ್ದಾರೆ. ನಾನ್ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ, ಅಧಿಕಾರವೇ ನನ್ನ ಹಿಂದೆ ಬಂದಿದೆ. ಖಾತೆ ಹಂಚಿಕೆ ಸಮಸ್ಯೆಯನ್ನು ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ ಎಂದು ಸಚಿವ ಎಸ್.ಅಂಗಾರ ಹೇಳಿದರು.

angara
ಸಚಿವ ಎಸ್.ಅಂಗಾರ

By

Published : Jan 26, 2021, 5:06 PM IST

ಉಡುಪಿ: ನಾನು ಸಂಘಟನೆಯಲ್ಲಿ ಬೆಳೆದು ಬಂದವನು, ನನಗೂ ಜವಾಬ್ದಾರಿ ಇದೆ. ಸರ್ಕಾರಕ್ಕೆ ಸಹಕಾರ ನೀಡಬೇಕಾಗುತ್ತದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಹೇಳಿದರು.

ಸಂಘಟನೆಯಲ್ಲಿ ಬೆಳೆದ ನನಗೂ ಜವಾಬ್ದಾರಿಯಿದೆ: ಸಚಿವ ಎಸ್.ಅಂಗಾರ

ಕ್ಷೇತ್ರದ ಜನತೆ ನನ್ನನ್ನು ಆರು ಅವಧಿಗೆ ಗೆಲ್ಲಿಸಿದ್ದಾರೆ. ನಾನ್ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ, ಅಧಿಕಾರವೇ ನನ್ನ ಹಿಂದೆ ಬಂದಿದೆ. ಖಾತೆ ಹಂಚಿಕೆ ಸಮಸ್ಯೆಯನ್ನು ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ. ಸರ್ಕಾರದ ಒಳಗಿರುವ ಎಲ್ಲರಿಗೂ ಒಂದೇ ರೀತಿ ಆಲೋಚನೆ ಇರಬೇಕು. ಆಲೋಚನೆಯಲ್ಲಿ ವ್ಯತ್ಯಾಸವಾದರೆ ರಾಜ್ಯದ ಅಭಿವೃದ್ಧಿಗೆ ಸಮಸ್ಯೆಯಾಗುತ್ತದೆ ಎಂದರು.

ಇದನ್ನೂ ಓದಿ:ರೈತರ ಹೋರಾಟ ಹತ್ತಿಕ್ಕುವುದು ಘನಘೋರ ಅಪರಾಧ : ಹೆಚ್ ಕೆ ಪಾಟೀಲ್

ಸಚಿವರ ಖಾತೆ ಹಂಚಿಕೆ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಉತ್ತಮ ಆಡಳಿತ ಕೊಡುವ ಮನೋಭಾವನೆ ಇದ್ದರೆ ಖಾತೆ ಕ್ಯಾತೆ ಬರುವುದಿಲ್ಲ ಎಂದು ಅಸಮಾಧಾನಿತರಿಗೆ ಕಿವಿಮಾತು ಹೇಳಿದರು.

ABOUT THE AUTHOR

...view details