ಉಡುಪಿ:ಮಳೆಗಾಲ ಆರಂಭವಾಯ್ತೆಂದರೆ ಸಾಕು ಕಡಲ ತೀರದ ಜನರು ಮಾತ್ರ ದಿಗಿಲುಗೊಳ್ತಾರೆ. ಅಬ್ಬರಿಸುವ ಸಮುದ್ರದಲೆಗಳ ಜತೆ ಅದೆಷ್ಟೋ ಜನರ ಬದುಕೂ ಕೊಚ್ಚಿ ಹೋಗುತ್ತದೆ. ಆದರೆ ಈ ಬಾರಿ ಕಡಲ್ಕೊರೆತ ತಡೆಯಲು ಲಂಬಕೋನದ ‘ಗ್ರೋಯೆನ್ಸ್’ ತಡೆಗೋಡೆ ಹಾಕಲಾಗಿದ್ದು, ಬಹುಕೋಟಿ ವೆಚ್ಚದ ಈ ಗೋಡೆ ಈ ಮಳೆಗಾಲದಲ್ಲಿ ಸತ್ವ ಪರೀಕ್ಷೆಗೆ ಒಳಗಾಗಲಿದೆ.
ವರ್ಷಪ್ರತಿ ನಡೆಯುವ ಕಡಲ ಕೊರೆತವನ್ನು ತಡೆಯುವ ಸಲುವಾಗಿ ಮಟ್ಟು ಬೀಚ್ನಿಂದ ಪಡುಕೆರೆಯವರೆಗೆ ಲಂಬಾಕಾರದ ಕಲ್ಲಿನ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ನಿರ್ಮಾಣವನ್ನು ‘ಗ್ರೋಯೆನ್ಸ್ ತಂತ್ರಜ್ಞಾನ’ ಎಂದು ಕರೆಯಲಾಗುತ್ತದೆ. ಚೆನ್ನೈ ಕಡಲತೀರದಲ್ಲಿ ಅಳವಡಿಸಿ ಯಶಸ್ವಿಯಾದ ಈ ತಡೆಗೋಡೆಯನ್ನು ಕರ್ನಾಟಕ ಕರಾವಳಿಯಲ್ಲೂ ನಿರ್ಮಾಣ ಮಾಡಲಾಗಿದೆ. ಮತ್ತಷ್ಟು ಸಮರ್ಪಕವಾಗಿ ಈ ಯೋಜನೆ ರೂಪಿಸಬಹುದಿತ್ತು ಎಂದು ಸ್ಥಳೀಯರಾದ ಪ್ರಭಾಕರ್ ಅಭಿಪ್ರಾಯಪಟ್ಟರು.