ಉಡುಪಿ: ಮುಂದಿನ ಪೀಳಿಗಾಗಿ ನಾವೆಲ್ಲರೂ ಗಿಡ ಬೆಳೆಸಿ, ಹಸಿರು ಕಪಾಡುವ ಮೂಲಕ ಪ್ರಕೃತಿಯ ಋಣ ತೀರಿಸಬೇಕಾಗಿದೆ. ಅದಕ್ಕಾಗಿ ಎಲ್ಲರೂ ಗಿಡವನ್ನು ಬೆಳೆಸಿ ಎಂದು ಕರೆ ನೀಡುವ ಮೂಲಕ ಕಾರ್ಕಳ ಮಿಷನ್ ವೃಕ್ಷ ತಂಡದಿಂದ ಕಾರ್ಕಳ ಪೇಟೆಯಲ್ಲಿ ರಸ್ತೆ ಡಿವೈಡರ್ ಮಧ್ಯ ಭಾಗದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗಿಡ ಬೆಳೆಸಿ, ಹಸಿರು ಉಳಿಸಿ: 250 ಸಸಿಗಳನ್ನು ನೆಟ್ಟ ಕಾರ್ಕಳ ಮಿಷನ್ ವೃಕ್ಷ ತಂಡ - ವೆಂಕಟರಮಣ ಮಂಡಳಿ
ಹಸಿರು ಸ್ವಚ್ಛ ಸುಂದರ ಕಾರ್ಕಳ ಪರಿಕಲ್ಪನೆಯೊಂದಿಗೆ ಮಿಷನ್ ವೃಕ್ಷ 50 ಕ್ಕೂ ಹೆಚ್ಚು ತಂಡದ ಸದಸ್ಯರಿಂದ ಸಾಲ್ಮರ ಜಯಭಾರತಿಯಿಂದ ತಾಲೂಕು ಕಚೇರಿವರೆಗೆ ಪುರಸಭೆಗೆ ಸಂಬಂಧಿಸಿದ ರಸ್ತೆ ಹಾಗೂ ಡಿವೈಡರ್ ಮಧ್ಯ ಭಾಗದಲ್ಲಿ ಸುಮಾರು 250 ಗಿಡಗಳನ್ನು ನೆಡಲಾಯಿತು.

ಮಿಷನ್ ವೃಕ್ಷ ತಂಡ
ಮಿಷನ್ ವೃಕ್ಷ ತಂಡ
ಹಸಿರು ಸ್ವಚ್ಛ ಸುಂದರ ಕಾರ್ಕಳ ಪರಿಕಲ್ಪನೆಯೊಂದಿಗೆ ಮಿಷನ್ ವೃಕ್ಷದ 50 ಕ್ಕೂ ಹೆಚ್ಚು ತಂಡದ ಸದಸ್ಯರಿಂದ ನಗರದ ಸಾಲ್ಮರ ಜಯಭಾರತಿಯಿಂದ ತಾಲೂಕು ಕಚೇರಿಯ ಪುರಸಭೆಗೆ ಸಂಬಂಧಿಸಿದ ರಸ್ತೆ ಹಾಗೂ ಡಿವೈಡರ್ ಮಧ್ಯ ಭಾಗದಲ್ಲಿ ಸುಮಾರು 250 ಗಿಡಗಳನ್ನು ನೆಡಲಾಯಿತು.
ವೆಂಕಟರಮಣ ಮಂಡಳಿಯ ಶ್ರೀನಿವಾಸ ಪೈ ಹಾಗೂ ವಿದ್ಯಾಭೂಷನ್ ಪೈ ಮುಂದಾಳತ್ವದಲ್ಲಿಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.