ಉಡುಪಿ :ಟೀ ಶರ್ಟ್ ಧರಿಸಿ, ಲುಂಗಿ ಕಟ್ಕೊಂಡು ತರಕಾರಿ ಗಿಡದ ಮಧ್ಯೆ ಕಳೆ ಕೀಳುತ್ತಾ ಅಪ್ಪಟ ರೈತರಂತಿರೋದು ಉಡುಪಿ ಜಿಲ್ಲಾಧಿಕಾರಿಗಳಿಗೆ ಬಲು ಅಚ್ಚುಮೆಚ್ಚು. ಹವ್ಯಾಸಿ ಕೃಷಿಕರಾಗಿರುವ ಜಿ. ಜಗದೀಶ್ ಅವರು ತಮ್ಮ ಕಚೇರಿಯ ಒತ್ತಡದ ಕೆಲಸದ ನಡುವೆಯೇ ತರಕಾರಿ ಕೃಷಿ ಮಾಡೋದು ಅಂದ್ರೆ ಪಂಚಪ್ರಾಣ. ಹೀಗಾಗಿ, ತಮ್ಮ ಬಂಗ್ಲೆಯ ಸುತ್ತಲೂ ಇವರು ಹೂವಿನ ಗಿಡಗಳ ಮಧ್ಯೆಯೇ ತರಕಾರಿಗಳನ್ನು ಬೆಳೆದಿದ್ದಾರೆ.
ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತೊಂಡೆ, ಬೆಂಡೆ, ಟೊಮ್ಯಾಟೊ, ಬಸಳೆ ಸೇರಿ ನಾನಾ ತರಕಾರಿಗಳನ್ನು ಬೆಳೆದಿದ್ದಾರೆ. ಇವರು ಸಾವಯವ ಕೃಷಿ ಮಾಡುತ್ತಿರೋದು ಮತ್ತೊಂದು ವಿಶೇಷ. ಕೃಷಿ ಕುಟುಂಬದಿಂದ ಬಂದ ಇವರು, ಶಾಲಾ ದಿನಗಳಲ್ಲಿ ಕೃಷಿ ಕೆಲಸಗಳನ್ನು ಮುಗಿಸಿ ಶಾಲೆಗೆ ತೆರಳುತ್ತಿದ್ದರಂತೆ.