ಉಡುಪಿ: ಖ್ಯಾತ ಬರಹಗಾರ, ಜಾಗತಿಕ ಸಾಹಿತ್ಯ ಅಧ್ಯಯನಕಾರ, ಹಿರಿಯ ಎಡಪಂಥೀಯ ಚಿಂತಕ ಜಿ ರಾಜ್ ಶೇಖರ್ ಇಂದು ಬೆಳಗ್ಗೆ ನಿಧನರಾಗಿದ್ದರು. ಅವರ ಅಂತಿಮ ಕ್ರಿಯೆ ಬೀಡಿನಗುಡ್ಡೆಯಲ್ಲಿ ನಡೆಯಿತು. ಕೋಮು ಸೌಹಾರ್ದ ವೇದಿಕೆ ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ರಾಜಶೇಖರ್ ಅವರು ಉತ್ತಮ ಸಾಹಿತ್ಯ ವಿಮರ್ಶಕರಾಗಿ ಪ್ರಖ್ಯಾತಿಗಳಿಸಿದ್ದರು.
ಯಶವಂತ ಚಿತ್ತಾಲ, ಗೋಪಾಲಕೃಷ್ಣ ಅಡಿಗ ಮೊದಲಾದವರ ಸಮಕಾಲೀನರಾಗಿ ಅವರ ಖ್ಯಾತ ಕೃತಿಗಳಿಗೆ ಮುನ್ನುಡಿ ಬರೆದಿರುವ ರಾಜಶೇಖರ್ ಅವರು ಕನ್ನಡದ ಪ್ರಸಿದ್ಧ ಲೇಖಕರಾಗಿದ್ದರು. ಆದರೆ, 90ರ ನಂತರ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡ ಇವರು ಕರಾವಳಿಯ ಕೋಮುವಾದಿ ಶಕ್ತಿಗಳ ವಿರುದ್ಧ ಸತ್ಯಶೋಧನಾ ವರದಿಗಳನ್ನು ಮಂಡನೆ ಮಾಡಿದ್ದರು. ಕಾರ್ಮಿಕ ಸಂಘಟನೆಗಳ ಮೂಲಕ ಬಂಡವಾಳ ಶಾಹಿ ವ್ಯವಸ್ಥೆಯ ವಿರುದ್ಧ ಕರಾವಳಿಯಲ್ಲಿ ಹೋರಾಟ ಸಂಘಟಿಸಿ ಚಳವಳಿ ನಡೆಸಿದ್ದರು.