ಉಡುಪಿ: ಲಾರಿಯಲ್ಲಿ ಅಕ್ರಮವಾಗಿ ಕೋಣಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರೆಸಿದ್ದಾರೆ.
ಅಕ್ರಮವಾಗಿ ಕೋಣಗಳ ಸಾಗಣೆ: ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು - ಅಕ್ರಮವಾಗಿ ಕೋಣಗಳ ಸಾಗಣೆ
ಹೊಸಂಗಡಿ ಚೆಕ್ ಪೋಸ್ಟ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಕೋಣಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
![ಅಕ್ರಮವಾಗಿ ಕೋಣಗಳ ಸಾಗಣೆ: ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು ಕೋಣ ಸಾಗಾಟ](https://etvbharatimages.akamaized.net/etvbharat/prod-images/768-512-09:28:15:1599364695-kn-udp-01-06-kona-sagata-patte-7202200-2jpg-06092020081555-0609f-1599360355-1058.jpg)
ಕೋಣ ಸಾಗಾಟ
ಹರಿಯಾಣದ ಪಾತೆಬಾದ್ ಜಿಲ್ಲೆಯ ಮಂಜಿತ್ ಸಿಂಗ್ (38), ರಾಜಸ್ಥಾನದ ಪವನ್ ಕುಮಾರ್ (32), ಉತ್ತರ ಪ್ರದೇಶದ ಗುಲ್ವಾಂ (29), ಹರಿಯಾಣ ರವಿಕುಮಾರ್ (25) ಎಂಬುರನ್ನು ವಶಕ್ಕೆ ಪಡೆಯಲಾಗಿದೆ.
ಹೊಸಂಗಡಿ ಚೆಕ್ ಪೋಸ್ಟ್ ಬಳಿ ಹುಲಿಕಲ್ ಘಾಟಿಯಿಂದ ಹೊಸಂಗಡಿ ಕಡೆಗೆ ಬಂದ ಲಾರಿ ತಪಾಸಣೆ ನಡೆಸಿದಾಗ ಅಕ್ರಮವಾಗಿ 30 ಕೋಣಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.