ಕರ್ನಾಟಕ

karnataka

ETV Bharat / state

ಜಾತ್ರೆಗಳಲ್ಲಿ ಒಂದು ಸಮುದಾಯದ ಬಹಿಷ್ಕಾರ ಕಾನೂನುಬಾಹಿರ: ಸಿದ್ದರಾಮಯ್ಯ - ಉಡುಪಿ ಜಾತ್ರೆ ಬಹಿಷ್ಕಾರದ ಬಗ್ಗೆ ಸಿದ್ದರಾಮಯ್ಯ ಮಾತು

ಯಾವುದೇ ಜಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಮನೆ, ಖಾಸಗಿ ಕಾರ್ಯಕ್ರಮವಾದರೆ ಅದು ಅವರ ಸ್ವಂತದ್ದು. ಜಾತ್ರೆಗಳು ಸಾರ್ವಜನಿಕರಿಗೆ ಸೇರಿದ್ದು, ಹೀಗಾಗಿ ಬಹಿಷ್ಕಾರ ಹಾಕಿದಲ್ಲಿ ಕಾನೂನಿಗೆ ವಿರುದ್ಧವಾದ ನಡವಳಿಕೆಯಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

festivals
ಸಿದ್ದರಾಮಯ್ಯ

By

Published : Mar 20, 2022, 8:30 PM IST

Updated : Mar 20, 2022, 8:50 PM IST

ಉಡುಪಿ:ನಮ್ಮದು ಸ್ವತಂತ್ರ ದೇಶ. ಈ ದೇಶದಲ್ಲಿ ಎಲ್ಲರೂ ಸ್ವತಂತ್ರರು. ಯಾರು ಯಾರಿಗೂ ಬೆದರಿಕೆ ಹಾಕುವಂತಿಲ್ಲ. ವ್ಯಾಪಾರ ವಹಿವಾಟು ನಡೆಸಲು ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಉಡುಪಿಯಲ್ಲಿ ಮಾತನಾಡಿದ ಅವರು, ಮುಸಲ್ಮಾನರಿಗೆ ವ್ಯಾಪಾರ ಬಹಿಷ್ಕಾರ ಹಾಕಲು ಕಾನೂನು ಅವಕಾಶ ಕೊಡುವುದಿಲ್ಲ. ಯಾವುದೇ ಜಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಮನೆ, ಖಾಸಗಿ ಕಾರ್ಯಕ್ರಮವಾದರೆ ಅದು ಅವರ ಸ್ವಂತದ್ದು. ಜಾತ್ರೆಗಳು ಸಾರ್ವಜನಿಕರಿಗೆ ಸೇರಿದ್ದು, ಹೀಗಾಗಿ ಬಹಿಷ್ಕಾರ ಹಾಕಿದಲ್ಲಿ ಕಾನೂನಿಗೆ ವಿರುದ್ಧವಾದ ನಡವಳಿಕೆಯಾಗುತ್ತದೆ ಎಂದರು.

ಉಡುಪಿ ಜಾತ್ರೆಯಲ್ಲಿ ಒಂದು ಸಮುದಾಯಕ್ಕೆ ಬಹಿಷ್ಕಾರ ಹಾಕಿದ ಬಗ್ಗೆ ಸಿದ್ದರಾಮಯ್ಯ ಮಾತು

ಸರ್ಕಾರ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕರಾವಳಿ, ಮಲೆನಾಡು, ಬಯಲುಸೀಮೆ ಸೇರಿದಂತೆ ಎಲ್ಲೇ ಈ ರೀತಿಯ ಘಟನೆಗಳು ನಡೆದಲ್ಲಿ, ಅದರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ನೈತಿಕ ವಿದ್ಯೆ ಕಲಿಹಿಸುವುದಾದರೆ ಕಲಿಸಿ. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಕಲಿಸಿ. ಯಾವುದೇ ತಾರತಮ್ಯ ಮಾಡಬೇಡಿ. ಚುನಾವಣೆಗೆ ಬೇರೆ ಬೇರೆ ವಿಷಯಗಳಿವೆ. 3 ವರ್ಷದ ಸಾಧನೆಯನ್ನು ಇವರು ಚುನಾವಣೆಯ ವಿಷಯ ಮಾಡಲಿ. ಭಾವನಾತ್ಮಕ ವಿಚಾರಗಳನ್ನು ಚುನಾವಣೆಗೆ ತರಬಾರದು ಎಂದರು.

ಓದಿ:ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜ ಆಗಲೇಬೇಕು: ಕಲ್ಲಡ್ಕ ಪ್ರಭಾಕರ್​​ ಭಟ್

Last Updated : Mar 20, 2022, 8:50 PM IST

ABOUT THE AUTHOR

...view details