ಉಡುಪಿ:ಆಳ ಸಮುದ್ರ ಮೀನುಗಾರಿಕಾ ಬೋಟ್ ಬಂಡೆಗೆ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಮಿನುಗಾರರು ಬಚಾವಾಗಿದ್ದಾರೆ.
ಉಡುಪಿಯಲ್ಲಿ ಬಂಡೆಗೆ ಮೀನುಗಾರಿಕಾ ಬೋಟ್ ಡಿಕ್ಕಿ: ಅದೃಷ್ಟವಶಾತ್ ತಪ್ಪಿದ ದುರಂತ - ಬಂಡೆಗೆ ಮೀನುಗಾರಿಕಾ ಬೋಟ್ ಡಿಕ್ಕಿ
ಉಡುಪಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ ಬೋಟ್ ದಡದಿಂದ ಮೂರು ನಾಟಿಕಲ್ ದೂರದಲ್ಲಿ ಬಂಡೆಗೆ ಡಿಕ್ಕಿ ಹೊಡೆದಿದೆ. ಅವಘಡದಿಂದ ಸುಮಾರು 80 ಲಕ್ಷ ರೂಪಾಯಿ ನಷ್ಟವಾಗಿದೆ.
ಬಂಡೆಗೆ ಮೀನುಗಾರಿಕಾ ಬೋಟ್ ಡಿಕ್ಕಿ
ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ ಬಾಹುಬಲಿ ಬೋಟ್ ದಡದಿಂದ ಮೂರು ನಾಟಿಕಲ್ ದೂರದಲ್ಲಿ ಬಂಡೆಗೆ ಡಿಕ್ಕಿ ಹೊಡೆದಿದೆ. ಉದ್ಯಾವರದ ಗಿರೀಶ ಸುವರ್ಣ ಎಂಬುವರ ಮಾಲಿಕತ್ವದ ಬೋಟ್ ಇದಾಗಿದ್ದು, ಅವಘಡದಿಂದ ಸುಮಾರು 80 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.
ಬೋಟ್ ಮುಳುಗಡೆ ಯಾಗುತ್ತಿದ್ದಂತೆ ಅದರಲ್ಲಿದ್ದ 7 ಜನ ಮೀನುಗಾರರು ಜಿಗಿದು ಈಜಿ ದಡ ಸೇರಿದ್ದಾರೆ. ಬೇರೆ ಮೀನುಗಾರಿಕಾ ಬೋಟ್ ಬಳಸಿ ಬೋಟ್ ದಡಕ್ಕೆ ಎಳೆಯುವ ಪ್ರಯತ್ನ ನಡೆದಿದೆ.