ಕರ್ನಾಟಕ

karnataka

ETV Bharat / state

ಗೇರು ಬೀಜದ ಫ್ಯಾಕ್ಟರಿಗೆ ಬೆಂಕಿ : 1.5 ಕೋಟಿ ರೂ. ಮೌಲ್ಯದ ವಸ್ತು ಸುಟ್ಟು ಭಸ್ಮ - ಹತ್ತಿ ಬೀಜದ ಫ್ಯಾಕ್ಟರಿಗೆ ಬೆಂಕಿ

ಶಾರ್ಟ್​ ಸರ್ಕ್ಯೂಟ್​​ನಿಂದ ಗೇರು ಬೀಜದ ಫ್ಯಾಕ್ಟರಿ ಸುಟ್ಟು ಭಸ್ಮವಾಗಿರುವ ಘಟನೆ ಉಡುಪಿ ಜಿಲ್ಲಯಲ್ಲಿ ಜರುಗಿದೆ. ಅವಘಡದಲ್ಲಿ ಸುಮಾರು 1.5 ಕೋಟಿ ರೂ. ಮೌಲ್ಯದ ವಸ್ತು ನಷ್ಟವಾಗಿದೆ ಎಂದು ಫ್ಯಾಕ್ಟರಿ ಮಾಲೀಕರು ತಿಳಿಸಿದ್ದಾರೆ.

fire to udupi Cotton Seed Factory
ಹತ್ತಿ ಬೀಜದ ಫ್ಯಾಕ್ಟರಿಗೆ ಬೆಂಕಿ

By

Published : Aug 25, 2020, 8:43 PM IST

Updated : Aug 25, 2020, 9:35 PM IST

ಉಡುಪಿ : ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಗೇರು ಬೀಜದ ಫ್ಯಾಕ್ಟರಿಗೆ ಬೆಂಕಿ ತಗುಲಿ ಎರಡು ಲಾರಿ ಸಹಿತ, ಇಂಡಸ್ಟ್ರಿ ಸಂಪೂರ್ಣ ಸಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕಂದೂರಿನಲ್ಲಿ ನಡೆದಿದೆ.

ಗೇರು ಬೀಜದ ಫ್ಯಾಕ್ಟರಿಗೆ ಬೆಂಕಿ.. ಅಪಾರ ಪ್ರಮಾಣದ ನಷ್ಟ

ಪ್ರಕಾಶ್ ಎಂಬುವವರಿಗೆ ಸೇರಿದ ಮಾರುತಿ ಇಂಡಸ್ಟ್ರೀಸ್​​ ಗೇರು ಬೀಜದ ಫ್ಯಾಕ್ಟರಿಗೆ ಬೆಂಕಿ ತಗುಲಿದೆ. ಮೂರು ಅಗ್ನಿ ಶಾಮಕ ದಳದ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಲಾಯಿತು.

ಬೀಜದ ಸಿಪ್ಪೆ ಮತ್ತು ಎಣ್ಣೆ ಇರುವುದರಿಂದ ಬೆಂಕಿ ಅತಿ ವೇಗವಾಗಿ ಪಸರಿಸಿದೆ. ಸುಮಾರು 1.5 ಕೋಟಿ ರೂ. ನಷ್ಟವಾಗಿದೆ ಎಂದು ಮಾಲೀಕ ಪ್ರಕಾಶ್ ತಿಳಿಸಿದ್ದಾರೆ.

Last Updated : Aug 25, 2020, 9:35 PM IST

ABOUT THE AUTHOR

...view details