ಉಡುಪಿ:ಈ ಸಮಾಜದಲ್ಲಿ ಮನುಷ್ಯನ ಜೀವಕ್ಕೆ ಮಾತ್ರವಲ್ಲ, ಮೂಕಪ್ರಾಣಿಗಳ ಜೀವಕ್ಕೂ ಬೆಲೆ ಇದೆ ಎಂಬುದನ್ನು ನಗರದ ಅಗ್ನಿಶಾಮಕದಳದ ಸಿಬ್ಬಂದಿ ಸಾಬೀತು ಮಾಡಿದ್ದಾರೆ.
ಯಾರಾದ್ರು ಆಕಸ್ಮಿಕವಾಗಿ ಬಾವಿಗೆ ಬಿದ್ದರೆ ಅಗ್ನಿಶಾಮಕದಳದವರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತುವುದನ್ನು ನೋಡಿದ್ದೇವೆ. ನಗರದ ಟಿಎಂಎ ಪೈ ಆಸ್ಪತ್ರೆಯ ಹಿಂಬದಿಯಲ್ಲಿರುವ ಬಾವಿಯ ಆವರಣದಲ್ಲಿ ಇಂತಹದ್ದೇ ಕಾರಣಕ್ಕೆ ಬುಧವಾರ ಅಗ್ನಿಶಾಮಕದಳದ ಕಾರ್ಯಾಚರಣೆ ನಡೆಯಿತು.
ಅಗ್ನಿಶಾಮಕ ಪಡೆಯಿಂದ ರಕ್ಷಣಾ ಕಾರ್ಯಾಚರಣೆ ಇದು ಮನುಷ್ಯರನ್ನು ಮೇಲಕ್ಕೆತ್ತಲು ನಡೆದ ಕಾರ್ಯಾಚರಣೆಯಲ್ಲ, ಬದಲಾಗಿ ಆಳದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ನಾಯಿಯನ್ನು ಕಂಡ ಅಗ್ನಿಶಾಮಕದಳದ ಸಿಬ್ಬಂದಿ ಬಾವಿಗೆ ಹಗ್ಗವನ್ನು ಇಳಿಸಿ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ಬಾವಿಯಿಂದ ಬಚಾವಾಗಿ ಬಂದ ಶ್ವಾನ, ಮೇಲಕ್ಕೆ ಬರುತ್ತಿದ್ದಂತೆ ಎದ್ದೆನೊ ಬಿದ್ದೆನೋ ಎಂಬಂತೆ ಓಡಿ ಜೀವ ಉಳಿಸಿಕೊಂಡಿದೆ. ಅಗ್ನಿಶಾಮಕದ ಈ ಕಾರ್ಯಾಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಓದಿ:ಲಾಕ್ಡೌನ್ ವಿಸ್ತರಣೆ ಸುಳಿವು ನೀಡಿದ ಸಿಎಂ.. ನಾಳೆಯಿಂದ ರಫ್ತು ಉದ್ಯಮಕ್ಕೆ ಅವಕಾಶ