ಉಡುಪಿ: ಕನ್ನಡ ಚಿತ್ರರಂಗದ ಖ್ಯಾತ ತಾರೆ ರಚಿತಾ ರಾಮ್ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಶೃಂಗೇರಿ ಶಾರದೆ, ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಚಿತಾ ರಾಮ್ - ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಕನ್ನಡ ಚಿತ್ರರಂಗದ ಖ್ಯಾತ ತಾರೆ ರಚಿತಾ ರಾಮ್ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು.
![ಶೃಂಗೇರಿ ಶಾರದೆ, ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಚಿತಾ ರಾಮ್ Film actress rachitha ram visits Kollur Mukambe temple](https://etvbharatimages.akamaized.net/etvbharat/prod-images/768-512-5794803-thumbnail-3x2-sheela.jpg)
ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದರ್ಶನ ಪಡೆದ ರಚಿತಾ ರಾಮ್, ಬಳಿಕ ಇಂದು ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ದೇವಳದಲ್ಲಿ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕೊಲ್ಲೂರು ಕ್ಷೇತ್ರದಿಂದ ರಚಿತಾ ರಾಮ್ ಅವರಿಗೆ ಫಲ ಪ್ರಸಾದಗಳನ್ನು ನೀಡಲಾಯಿತು.
ಇನ್ನು ರಚಿತಾ ನಿನ್ನೆಯೇ ಶೃಂಗೇರಿಗೆ ಭೇಟಿ ನೀಡಿರೋದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಏಕೆಂದರೆ ಕಳೆದ ಐದು ದಿನಗಳಿಂದ ಶಾರದಾಂಬೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಚಂಡಿ ಯಾಗ ಮಾಡಿಸುತ್ತಿದ್ದಾರೆ. ನಿನ್ನೆ ಯಾಗದ ಪೂರ್ಣಾಹುತಿ ಕಾರ್ಯ ನಡೆದಿದ್ದು, ದೇವೇಗೌಡರ ಇಡೀ ಕುಟುಂಬವೇ ಶೃಂಗೇರಿಯಲ್ಲಿತ್ತು.