ಉಡುಪಿ: 'ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಅವರ ಇಬ್ಬರು ಆಪ್ತರ ಮೇಲೆ ಎಫ್ಐಆರ್ ದಾಖಲು ಮಾಡಿದ್ದೇವೆ. ಪಂಚನಾಮೆ ಪ್ರಕ್ರಿಯೆ ಕೆಲಹೊತ್ತಿನ ಹಿಂದೆ ಆರಂಭವಾಗಿದೆ. ಹತ್ತಿರದ ಸಂಬಂಧಿಕರ ಮುಂಭಾಗದಲ್ಲೇ ಎಲ್ಲಾ ಪರಿಶೀಲನೆ ಮಾಡ್ತಿದ್ದೇವೆ. ಸಾಂದರ್ಭಿಕ ಸ್ಥಳದಲ್ಲಿದ್ದಂತಹ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಕೆಎಂಸಿ ಮತ್ತು ಮಂಗಳೂರಿನ ಫೊರೆನ್ಸಿಕ್ ತಜ್ಞರು ಸಹ ಇದ್ದಾರೆ' ಎಂದು ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿ ರೇ ಗುತ್ತಿಗೆದಾರನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
ಸಚಿವ ಈಶ್ವರಪ್ಪ, ಇಬ್ಬರು ಆಪ್ತರ ಮೇಲೆ ಎಫ್ಐಆರ್ ದಾಖಲು - ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ
'ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು. ನಂತರ ಎಫ್ಐಆರ್ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಕೆಎಂಸಿ ಮತ್ತು ಮಂಗಳೂರಿನ ಫೊರೆನ್ಸಿಕ್ ತಜ್ಞರು ಸಹ ಇದ್ದಾರೆ' ಎಂದು ಐಜಿಪಿ ದೇವ ಜ್ಯೋತಿ ರೇ ತಿಳಿಸಿದರು.
ಸಚಿವ ಈಶ್ವರಪ್ಪ, ಇಬ್ಬರು ಆಪ್ತರ ಮೇಲೆ ಎಪ್ಐಆರ್ ದಾಖಲು ಮಾಡಿದ್ದೇವೆ ಎಂದ ಐಜಿಪಿ ಜ್ಯೋತಿ ರೇ
'ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು. ನಂತರ ಎಫ್ಐಆರ್ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. 3 ರಿಂದ 4 ಗಂಟೆಗಳ ಕಾಲ ಪ್ರಕ್ರಿಯೆ ನಡೆಯಬಹುದು. ಎಲ್ಲಾ ರೀತಿಯಲ್ಲೂ ಸೂಕ್ತ ತನಿಖೆ ಮಾಡುತ್ತೇವೆ' ಎಂದರು.
ಇದನ್ನೂ ಓದಿ: ಬಳ್ಳಾರಿ: ಗಣಿ ತ್ಯಾಜ್ಯದ ರಾಶಿ ಕುಸಿದು ಇಬ್ಬರು ಸಾವು
Last Updated : Apr 13, 2022, 3:47 PM IST