ಕರ್ನಾಟಕ

karnataka

ETV Bharat / state

ಹಿಂದೂ ಜಾಗರಣ ವೇದಿಕೆ‌ಯಿಂದ ನಟ ಚೇತನ್ ವಿರುದ್ಧ ದೂರು ದಾಖಲು - ನಟ ಚೇತನ್ ವಿರುದ್ಧ ದೂರು ದಾಖಲು

ಹಿಂದೂ ಸಂಸ್ಕೃತಿಯ ಬಗ್ಗೆ ಒಪ್ಪಲಾಗದ ಕೆಲವು ಹೇಳಿಕೆ ನೀಡಿದ್ದ ನಟ ಚೇತನ್ ವಿರುದ್ಧ ದೂರು ದಾಖಲು ಮಾಡಲಾಗಿದೆ.

File complaint against actor Chetan
File complaint against actor Chetan

By

Published : Oct 20, 2022, 1:51 PM IST

Updated : Oct 20, 2022, 2:29 PM IST

ಕಾರ್ಕಳ (ಉಡುಪಿ) :ಭೂತ ಕೋಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ನಟ ಚೇತನ್ ವಿರುದ್ಧ ಹಿಂದೂ ಜಾಗರಣ ವೇದಿಕೆ‌ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲು ಮಾಡಿದೆ. ಕಾಂತಾರ ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡುತ್ತಾ ನಟ ಚೇತನ್ ಅವರು ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಈ ದೂರು ಪ್ರತಿಯಲ್ಲಿ ಉಲ್ಲೇಖ ಮಾಡಲಾಗಿದೆ.

ದೂರು ಪ್ರತಿ

ಹಿಂದಿ ಹೇರಿಕೆ ಹೇಗೆ ಒಪ್ಪೋಕಾಗಲ್ವೋ ಹಾಗೆಯೇ ಹಿಂದುತ್ವ ಹೇರಿಕೆ ಒಪ್ಪಲಾಗಲ್ಲ. ಧರ್ಮ, ಜಾತಿಗಳಲ್ಲಿ ವಿವಿಧತೆ ಇದೆ. ಹಿಂದೂ ಬೇರೆ ಹಿಂದುತ್ವ ಬೇರೆ. ಭೂತಕೋಲ ಮೂಲ ನಿವಾಸಿಗಳ ಆಚರಣೆ. ಕೇವಲ ಹಿಂದು ಧರ್ಮದ್ದಲ್ಲ. ಎಲ್ಲ ಆಚರಣೆಗಳನ್ನು ಗೌರವಿಸಿ, ಪಾಲಿಸಿ. ಆದರೆ, ಎಲ್ಲವನ್ನೂ ಹಿಂದೂಗಳ ಸ್ವಂತ ಎನ್ನೋಕ್ಕಾಗಲ್ಲ ಎಂದು ಹೇಳುವ ಮೂಲಕ ಚೇತನ್ ನಮ್ಮ ಧರ್ಮದ ನಂಬಿಕೆಗೆ ದಕ್ಕೆ ಉಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹ ವ್ಯಕ್ತಪಡಿಸಿದೆ.

ಹಿಂದೂ ಜಾಗರಣ ವೇದಿಕೆ‌

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ಮಾತ್ರವಲ್ಲದೇ ಬರವಣೆಗೆಯ ಮೂಲಕವೂ ನೋವು ತರವು ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ಇಂತಹ ಕೃತ್ಯಗಳನ್ನು ಮಾಡದಂತೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ:ಹಿಂದಿ ಹೇರಿಕೆ ಹೇಗೆ ಒಪ್ಪೋಕಾಗಲ್ವೋ ಹಿಂದುತ್ವ ಹೇರಿಕೆಯನ್ನೂ ಒಪ್ಪಲಾಗಲ್ಲ: ನಟ ಚೇತನ್​​

Last Updated : Oct 20, 2022, 2:29 PM IST

ABOUT THE AUTHOR

...view details