ಉಡುಪಿ:ಸಾಸ್ತಾನ್ ಟೋಲ್ ಗೇಟ್ನಲ್ಲಿ ಒಂದು ರೂಪಾಯಿ ಚಿಲ್ಲರೆ ವಿಷಯಕ್ಕಾಗಿ ಗಲಾಟೆ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
1 ರೂಪಾಯಿಗಾಗಿ ಟೋಲ್ ಗೇಟ್ನಲ್ಲಿ ಹೊಡೆದಾಟ 5 ರೂಪಾಯಿ ಚಿಲ್ಲರೆ ಬದಲಿಗೆ 4 ರೂಪಾಯಿ ನೀಡಿದ್ದ ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯುವಕರು, ಒಂದು ರೂಪಾಯಿ ನೀಡಿಲ್ಲ ಎನ್ನುವ ಕಾರಣಕ್ಕೆ ಗಲಾಟೆ ಆರಂಭಿಸಿದ್ದು, ತದನಂತರ ಅದು ತಾರಕ್ಕೇರಿದೆ.
ಕೊರೊನಾ ವೈರಸ್ ಭೀತಿ ನಡುವೆ ಕೂಡ ಸಾಮಾಜಿಕ ಅಂತರ ಮರೆತು ಒಂದು ರೂಪಾಯಿಗೋಸ್ಕರ ಟೋಲ್ ಸಿಬ್ಬಂದಿಯನ್ನ ತಳ್ಳಿ ವಾಹನ ಸವಾರರು ಗಲಾಟೆ ಶುರು ಮಾಡಿದ್ದಾರೆ. ಈ ವೇಳೆ ತಳ್ಳಾಟ, ಹೊಡೆದಾಟ ನಡೆದಿದೆ.
ಯುವಕರ ಗುಂಪು ಹಾಗೂ ಟೋಲ್ ಸಿಬ್ಬಂದಿ ನಡುವೆ ಗುಂಪು ಘರ್ಷಣೆ ಆಗಿದ್ದು, ಈ ವೇಳೆ ಪೊಲೀಸ್ ಸಿಬ್ಬಂದಿ ಇರಲಿಲ್ಲ ಎಂದು ತಿಳಿದು ಬಂದಿದೆ. ಕೊರೊನಾ ವೈರಸ್ ಕಾರಣಕ್ಕಾಗಿ ಕಳೆದ ಕೆಲ ತಿಂಗಳಿಂದ ಈ ಟೋಲ್ ಬಂದ್ ಆಗಿತ್ತು. ಆಧರೆ ಇದೀಗ ಓಪನ್ ಮಾಡಲಾಗಿದೆ.