ಕರ್ನಾಟಕ

karnataka

ETV Bharat / state

ಲಾರಿ ಡಿಕ್ಕಿ.. ತಂದೆ ಮಗ ಸಾವು, ಲಾರಿ ಚಾಲಕ ವಶಕ್ಕೆ

ಪರಾರಿಯಾಗಿದ್ದ ಚಾಲಕ ಶೇಖರ್​ ಎಂಬಾತನನ್ನು ನಿನ್ನೆ ಮೂಡಬಿದಿರೆ ಸಮೀಪ ಪೊಲೀಸರು ವಶಕ್ಕೆ ಪಡೆದಿದ್ದು, ಲಾರಿಯನ್ನು ಚಾಲನೆ ಮಾಡುತ್ತಿದ್ದಾತ 16 ವರ್ಷದ ಬಾಲಕ ಎಂಬ ಅಪಾಯಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

died boy and lorry
ಮೃತ ಬಾಲಕ ಹಾಗೂ ಲಾರಿ

By

Published : Sep 16, 2022, 5:49 PM IST

ಉಡುಪಿ: ಉಡುಪಿ ಜಿಲ್ಲೆಯ ಉಚ್ಚಿಲದಲ್ಲಿ ನಡೆದ ಭೀಕರ ಅಪಘಾತದಲ್ಲಿ ತಂದೆ ಮಗ ಸಾವನ್ನಪ್ಪಿದ್ದು, ಅಪಘಾತದ ಬಳಿಕ ಅಪಘಾತಕ್ಕೆ ಕಾರಣವಾದ ಲಾರಿಯೊಂದಿಗೆ ಪರಾರಿಯಾಗಿದ್ದ ಚಾಲಕ ಶೇಖರ್​ ಎಂಬಾತನನ್ನು ನಿನ್ನೆ ಮೂಡಬಿದಿರೆ ಸಮೀಪ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ, ಅಪಘಾತವಾದ ಲಾರಿಯನ್ನು ಚಾಲನೆ ಮಾಡುತ್ತಿದ್ದಾತ 16 ವರ್ಷದ ಬಾಲಕ ಎಂಬ ಅಪಾಯಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಅಪಘಾತವಾದ ಲಾರಿಯಲ್ಲಿ ಕ್ಲೀನರ್ ಆಗಿ ಈ ಬಾಲಕ ದುಡಿಯುತಿದ್ದನು. ಲಾರಿ ಚಲಾಯಿಸುವ ಅತೀವ ಆಸಕ್ತಿ ಇದ್ದ ಬಾಲಕ ಈ ಹಿಂದೆ ಕೂಡಾ ಹಲವು ಬಾರಿ ಲಾರಿ ಚಲಾಯಿಸಿದ್ದನು. ಅಪಘಾತಕ್ಕೂ 20 ನಿಮಿಷ ಮುನ್ನ ತನಗೆ ನಿದ್ದೆ ಬರುತ್ತಿದೆ ಎಂದಿದ್ದನಂತೆ. ಮುಂದೆ ಟೀ ಶಾಪ್ ಇದೆ ಅಲ್ಲಿ ಟೀ ಕುಡಿದು ಬಳಿಕ ನಾನು ಗಾಡಿ ಓಡಿಸುತ್ತೇನೆ ಎಂದು ಚಾಲಕ ಶೇಖ‌ರ್​ ಹೇಳಿದ್ದಾನೆ.

ಆದರೆ ನಿದ್ದೆ ಮಂಪರಿನಲ್ಲಿ ಲಾರಿ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಡಿಕ್ಕಿ ಹೊಡೆದಿದ್ದನು. ಅಪಘಾತದ ತೀವ್ರತೆಗೆ ಬೆಳಗಾವಿ ಮೂಲದ ಪ್ರಭಾಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗ ಸಮರ್ಥ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಕಾಪು ಬಳಿಯ ಆನೆಗುಂದಿ ಸರಸ್ವತಿ ಪೀಠದಿಂದ ಗಣೇಶನ ಹಬ್ಬಕ್ಕೆ ರಜೆಯಲ್ಲಿ ಊರಿಗೆ ತೆರಳಿದ್ದ ಏಳನೇ ತರಗತಿಯ ಸಮರ್ಥ್, ಮಂಗಳವಾರ ಸಂಜೆ ಬೆಳಗಾವಿಯ ಹುಕ್ಕೇರಿ ಭಗವಾನ್ ಗಲ್ಲಿಯ ನಿವಾಸಿ ತಂದೆ ಪ್ರಭಾಕರ್ ಅವರೊಂದಿಗೆ ಹೊರಟವರು ಉಚ್ಚಿಲಕ್ಕೆ ಬೆಳ್ಳಂಬೆಳಗ್ಗೆ ಸರ್ಕಾರಿ ಬಸ್​​​ನಲ್ಲಿ ಆಗಮಿಸಿದ್ದರು. ಬಸ್​ನಿಂದ ಇಳಿದು ರಸ್ತೆ ಪಕ್ಕ ನಿಂತಿದ್ದಾಗ ತಂದೆ ಮಗನಿಗೆ ಲಾರಿ ಡಿಕ್ಕಿ ಹೊಡೆದಿದೆ. ಸದ್ಯ ಚಾಲಕ ಶೇಖರ್​ಗೆ ನ್ಯಾಯಾಂಗ ಬಂಧನ‌ ವಿಧಿಸಿ ಬಾಲಕನನ್ನು ಪೋಲಿಸರು ಖಾಸಗಿ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.

ಇದನ್ನೂ ಓದಿ:ದಾವಣಗೆರೆಯಲ್ಲಿ ಸರಣಿ ಅಪಘಾತ: ಪತಿ ಪ್ರಾಣ ಉಳಿಸಲು ಹೊರಟ ಶಿಕ್ಷಕಿ, ಬೈಕ್​​ ಸವಾರ ಸಾವು

ABOUT THE AUTHOR

...view details