ಉಡುಪಿ:ಸಾವಯವ ಕೃಷಿಕರೊಬ್ಬರು ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ಬುಧವಾರ ನಡೆದಿದೆ. ತೆಳ್ಳಾರು ನೀಲೆ ಬೆಟ್ಟುವಿನ ಭಾಸ್ಕರ ಹೆಗ್ಡೆ (63) ಎಂಬುವರು ಮೃತ ವ್ಯಕ್ತಿ.
ಭಾಸ್ಕರ ಹೆಗ್ಡೆ ಪತ್ನಿ ಟೀ ಮಾಡಲೆಂದು ಅಡುಗೆ ಕೊಠಡಿ ಪ್ರವೇಶಿಸಿದ್ದ ವೇಳೆ ಗುಂಡಿನ ಸದ್ದು ಕೇಳಿಬಂದಿದೆ. ಹೊರಗೆ ಬಂದು ನೋಡಿದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.