ಕರ್ನಾಟಕ

karnataka

ETV Bharat / state

ಉಡುಪಿ‌: ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ - etv bharat kannada

ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ ಮಾಡಿದ ಘಟನೆ ಉಡುಪಿ‌ಯಲ್ಲಿ ನಡೆದಿದೆ

drunken-girl-creates-ruckus-with-public-at-udupi
ಉಡುಪಿ‌: ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ

By

Published : Nov 5, 2022, 9:38 PM IST

ಉಡುಪಿ:ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ ಮಾಡಿದ ಘಟನೆ ಉಡುಪಿ‌ ಮಣಿಪಾಲ ಡಿಸಿ ಆಫೀಸ್ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮದ್ಯ ಸೇವನೆ ಮಾಡಿದ್ದ ಯುವಕ, ಯುವತಿ ಪಿಜ್ಜಾ ಶಾಫ್‌ಗೆ ಬಂದು ಸಾರ್ವಜನಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ.

ಈ ವೇಳೆ ಅಲ್ಲಿನ ಸಿಬ್ಬಂದಿಯು ಪಿಜ್ಜಾ ಶಾಪ್​ನಿಂದ ಇಬ್ಬರನ್ನು ಹೊರಗೆ ಕಳುಹಿಸಿದ್ದಾರೆ. ಬಳಿಕ ಯುವತಿಯು ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ ಎನ್ನಲಾಗಿದೆ. ಇದೇ ವೇಳೆ, ಸಾರ್ವಜನಿಕರು ಯುವತಿಯ ತಲೆ ಮೇಲೆ ತಣ್ಣೀರು ಹಾಕಿ ನಶೆ ಇಳಿಸಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಆಗ ಅವರ ಯುವತಿ ಹಲ್ಲೆಗೆ ಮುಂದಾಗಿದ್ದಾಳಂತೆ.

ನಶೆಯಲ್ಲಿ ತೂರಾಡುತ್ತಿದ್ದ ಯುವತಿ ತನ್ನೊಂದಿಗಿದ್ದ ಯುವಕನಿಗೂ ಚಪ್ಪಲಿಯಿಂದ ಬಾರಿಸಿದ್ದಾಳೆ. ಕೊನೆಗೆ ಆಕೆಯನ್ನು ಮಣಿಪಾಲ ಠಾಣೆ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಮೂಲತಃ ಬೇರೆ ರಾಜ್ಯದವಳು ಎನ್ನಲಾದ ಯುವತಿಯ ರಂಪಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ:ಇಷ್ಟು ದಿನ ಬೂಟ್​ ನೆಕ್ಕಿದ್ದೀರಿ ಎಂದು ಸ್ವಕ್ಷೇತ್ರ ಜನರ ವಿರುದ್ಧವೇ ಶಾಸಕಿಯ ವಿವಾದಿತ ಹೇಳಿಕೆ

ABOUT THE AUTHOR

...view details