ಕರ್ನಾಟಕ

karnataka

ETV Bharat / state

ಕುಡಿದು ತೂರಾಡಿದ ಬಸ್ ಡ್ರೈವರ್: ಪ್ರಯಾಣಿಕರು ಅತಂತ್ರ - ಈಟಿವಿ ಭಾರತ ಕನ್ನಡ

ಖಾಸಗಿ ಬಸ್​ ಚಾಲಕನೊಬ್ಬ ನಡುರಸ್ತೆಯಲ್ಲಿ ಕುಡಿದು ಬಿದ್ದು ಪ್ರಯಾಣಿಕರು ಪರದಾಡಿರುವ ವಿಡಿಯೋವೊಂದು ವೈರಲ್ ಆಗಿದೆ.

drunk-private-bus-driver-who-fell-in-the-middle-of-the-road
ಕುಡಿದು ತೂರಾಡಿದ ಬಸ್ ಡ್ರೈವರ್ : ಪ್ರಯಾಣಿಕರು ಅತಂತ್ರ

By

Published : Sep 14, 2022, 10:57 PM IST

ಉಡುಪಿ: ಬೆಂಗಳೂರು ಕುಂದಾಪುರ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಚಾಲಕನೊಬ್ಬ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲಿ ಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ಉಡುಪಿ ಮೂಲದ ಎನ್ನಲಾದ ಭಾರತಿ ಬಸ್ ಚಾಲಕನೇ ಕುಡಿದು ಅಮಲೇರಿಸಿಕೊಂಡು ರಸ್ತೆ ಮಧ್ಯೆ ಬಿದ್ದಿದ್ದಾನೆ.

ಕುಡಿದು ತೂರಾಡಿದ ಬಸ್ ಡ್ರೈವರ್: ಪ್ರಯಾಣಿಕರು ಅತಂತ್ರ

ಮೊದಲೇ ಕುಡಿದು ಬಸ್​ ಚಾಲನೆ ಮಾಡಿಕೊಂಡು ಬಂದಿದ್ದ ಚಾಲಕ ಬಸ್​​​​ ಅನ್ನು ಮಧ್ಯರಾತ್ರಿ ರಸ್ತೆ ಮಧ್ಯೆ ವಿರಾಮಕ್ಕೆಂದು ನಿಲ್ಲಿಸಿದ್ದಾನೆನ್ನಲಾಗಿದೆ. ಈ ಸಂದರ್ಭ ಮತ್ತೆ ಕುಡಿದಿದ್ದು ದೇಹದ ನಿಯಂತ್ರಣ ಕಳೆದುಕೊಂಡಿದ್ದಾನೆ. ಅಲ್ಲದೇ ಓಲಾಡುತ್ತಾ ಮತ್ತೆ ಬಸ್ ಬಳಿ ಬಂದು ಚಾಲನೆಗಾಗಿ ಬಂದಿದ್ದಾನೆ. ಈ ಬಸ್​ನಲ್ಲಿದ್ದ ವ್ಯಕ್ತಿ ಚಾಲಕನಿಗೆ ಹೊಡೆದಿದ್ದಾನೆ. ಮೊದಲೇ ದೇಹದ ನಿಯಂತ್ರಣ ಕಳೆದುಕೊಂಡಿದ್ದ ಚಾಲಕ ಹೆದ್ದಾರಿ ನಡುವೆಯೇ ಬಿದ್ದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ :ದಕ್ಷಿಣ ಕನ್ನಡ ಡಿಸಿ ಹೆಸರಿನಲ್ಲಿ ವಾಟ್ಸ್​ಆ್ಯಪ್​ ಸೃಷ್ಟಿ- ಜಾಗರೂಕರಾಗಿರಲು ಮನವಿ

ABOUT THE AUTHOR

...view details